For the best experience, open
https://m.newskannada.com
on your mobile browser.
Advertisement

ಸದ್ದಿಲ್ಲದೆ ಬ್ಯಾಡ್ಮಿಂಟನ್​ ಆಟಗಾರನನ್ನು ವರಿಸಿದ ತಾಪ್ಸಿ ಪನ್ನು

ಬಾಲಿವುಡ್​ ನಟಿ ತಾಪ್ಸಿ ಪನ್ನು ಸದ್ದಿಲ್ಲದೆ ಹುಕಾಲದ ಗೆಳೆಯ, ಬ್ಯಾಡ್ಮಿಂಟನ್​ ಆಟಗಾರ ಮಥಿಯಾಸ್​​ ಬೋ ಅವರನ್ನು ವಿವಾಹವಾಗಿದ್ದಾರೆ ಎಂದು ತಿಳಿದು ಬಂದಿದೆ.
02:38 PM Mar 25, 2024 IST | Ashika S
ಸದ್ದಿಲ್ಲದೆ ಬ್ಯಾಡ್ಮಿಂಟನ್​ ಆಟಗಾರನನ್ನು ವರಿಸಿದ ತಾಪ್ಸಿ ಪನ್ನು

ಮುಂಬೈ: ಬಾಲಿವುಡ್​ ನಟಿ ತಾಪ್ಸಿ ಪನ್ನು ಸದ್ದಿಲ್ಲದೆ ಹುಕಾಲದ ಗೆಳೆಯ, ಬ್ಯಾಡ್ಮಿಂಟನ್​ ಆಟಗಾರ ಮಥಿಯಾಸ್​​ ಬೋ ಅವರನ್ನು ವಿವಾಹವಾಗಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಬಾಲಿವುಡ್​ ಬೆಡಗಿ ಮಾರ್ಚ್​ 23ರಂದು ಸದ್ದಿಲ್ಲದೆ ವಿವಾಹವಾಗಿದ್ದಾರೆ. ಸದ್ಯ ಇವರ ವಿವಾಹ ಸುದ್ದಿ 2 ದಿನಗಳ ಬಳಿಕ ಬೆಳಕಿಗೆ ಬಂದಿದೆ.

ತಾಪ್ಸಿ ತನ್ನ ಮದುವೆಗೆ ಕೆಲವೇ ಕೆಲವರನ್ನು ಆಹ್ವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ, ಅನುರಾಗ್​ ಕಶ್ಯಪ್​​, ಕನಿಕಾ ಧಿಲ್ಲೋನ್​ ಇವರ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.

Advertisement

ತಾಪ್ಸಿ ಮತ್ತು ಮಥಿಯಾಸ್​ ಅನೇಕ ವರ್ಷಗಳಿಂದ ಡೇಟಿಂಗ್​ ಮಾಡುತ್ತಿದ್ದರು. ಇವರು 2013ರಲ್ಲಿ ಇಂಡಿಯನ್​ ಬ್ಯಾಡ್ಮಿಂಟನ್​​ ಲೀಗ್​ನಲ್ಲಿ ಮೊದಲು ಭೇಟಿಯಾದರು. ನವ ಜೋಡಿ ಸಿಖ್​ ಮತ್ತು ಕ್ರಿಶ್ಚಿಯನ್​ ಧರ್ಮದ ಪ್ರಕಾರ ಮದುವೆಯಾಗಿದ್ದಾರೆ ಎಂದು ವರದಿಯಾಗಿದೆ.

‘ತಪ್ಪಡ್’​ ಸಹನಟ ಪಾವೈಲ್​ ಗುಲಾಟಿ ತಾಪ್ಸಿ ಮದುವೆಯ ಫೋಟೋ ಹಂಚಿಕೊಂಡಿದ್ದು, ಅದರಲ್ಲಿ ‘ಟ್ಬಿಂಕಲ್​ ಟ್ವಿಂಕಲ್​ ಲಿಟಲ್​ ಸ್ಟಾರ್​, ನಾವು ಎಲ್ಲಿದ್ದೇವೆ ಎಂದು ನಮಗೆ ತಿಳಿದಿಲ್ಲ’ ಎಂದು ಬರೆದುಕೊಂಡಿದ್ದಾರೆ.

 

View this post on Instagram

 

A post shared by Pavail Gulati (@pavailgulati)

Advertisement
Tags :
Advertisement