For the best experience, open
https://m.newskannada.com
on your mobile browser.
Advertisement

ತೆಲುಗು ನಟ, ನಿರ್ದೇಶಕ ಸೂರ್ಯ ಕಿರಣ್ ನಿಧನ

ಖ್ಯಾತ ತೆಲುಗು ನಟ ಮತ್ತು ನಿರ್ದೇಶಕ ಸೂರ್ಯ ಕಿರಣ್  ದಿಢೀರ್​​​​ ಹಾರ್ಟ್​ ಅಟ್ಯಾಕ್​​ ಆಗಿ ಸಾವನ್ನಪ್ಪಿದ್ದಾರೆ.  ನಾಳೆ ಇವರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ. 
06:14 PM Mar 11, 2024 IST | Ashika S
ತೆಲುಗು ನಟ  ನಿರ್ದೇಶಕ ಸೂರ್ಯ ಕಿರಣ್ ನಿಧನ

ಖ್ಯಾತ ತೆಲುಗು ನಟ ಮತ್ತು ನಿರ್ದೇಶಕ ಸೂರ್ಯಕಿರಣ್ ದಿಢೀರ್​​​​ ಹಾರ್ಟ್​ ಅಟ್ಯಾಕ್​​ ಆಗಿ ಸಾವನ್ನಪ್ಪಿದ್ದಾರೆ.  ನಾಳೆ ಇವರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.

Advertisement

ಇತ್ತೀಚೆಗೆ ತೀವ್ರ ಅನಾರೋಗ್ಯದಿಂದ ಸೂರ್ಯ ಕಿರಣ್ ಇಂದು ನಿಧನರಾಗಿದ್ದಾರೆ. ಸೂರ್ಯ ಕಿರಣ್‌ ಜಾಂಡೀಸ್ ಕಾಯಿಲೆಗೆ ತುತ್ತಾಗಿದ್ದರು. ಇದಕ್ಕಾಗಿ ಸೂಕ್ತ ಚಿಕಿತ್ಸೆ ಕೂಡ ಪಡೆಯುತ್ತಿದ್ದರು.

80ರ ದಶಕದಲ್ಲೇ ತೆಲುಗು ಸಿನಿಮಾ ಇಂಡಸ್ಟ್ರಿಗೆ ಬಾಲ ನಟರಾಗಿ ಎಂಟ್ರಿ ಕೊಟ್ಟಿದ್ದ ಸೂರ್ಯ ಕಿರಣ್‌ ಬಳಿಕ ನಿರ್ದೇಶಕರಾಗಿದ್ದರು. ಯಾವಾಗ ಸಿನಿಮಾ ಇಂಡಸ್ಟ್ರಿಯಲ್ಲಿ ಸಕ್ಸಸ್​ ಸಿಗಲಿಲ್ಲವೋ ಅಂದಿನಿಂದಲೇ ಇವರ ಆರೋಗ್ಯ ಕೆಟ್ಟಿತ್ತು.

Advertisement

ಕನ್ನಡದ ನಟಿ ಕಲ್ಯಾಣಿ ಅವರನ್ನು ಸೂರ್ಯ ಮದುವೆ ಆಗಿದ್ದರು. 2006ರಲ್ಲಿ ಮದುವೆಯಾದ ಈ ಜೋಡಿ ಸುಮಾರು ವರ್ಷಗಳು ಜೊತೆಯಲ್ಲೇ ಇದ್ದರು. ಬಳಿಕ ಇಬ್ಬರು ಹಣಕಾಸಿನ ವಿಚಾರಕ್ಕೆ ಬೇರೆಯಾಗಿದ್ದರು

ಸೂರ್ಯ ಕಿರಣ್ ನಿಧನಕ್ಕೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.

Advertisement
Tags :
Advertisement