ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಆ್ಯಂಜಿಯೋಪ್ಲಾಸ್ಟಿಗೆ ಒಳಗಾದ ತೆಲುಗಿನ ಖ್ಯಾತ ನಟ ಸಯಾಜಿ ಶಿಂಧೆ

ಏಪ್ರಿಲ್ 11ರಂದು ತೆಲುಗಿನ ಖ್ಯಾತ ನಟ ಸಯಾಜಿ ಶಿಂಧೆ  ಅವರು ತೀವ್ರವಾಗಿ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಏಕಾಏಕಿ ಆಸ್ಪತ್ರೆಗೆ ದಾಖಲಾಗಿದ್ದರು.
03:17 PM Apr 13, 2024 IST | Ashika S

ಏಪ್ರಿಲ್ 11ರಂದು ತೆಲುಗಿನ ಖ್ಯಾತ ನಟ ಸಯಾಜಿ ಶಿಂಧೆ  ಅವರು ತೀವ್ರವಾಗಿ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಏಕಾಏಕಿ ಆಸ್ಪತ್ರೆಗೆ ದಾಖಲಾಗಿದ್ದರು.

Advertisement

ಈಗ ಎಲ್ಲಾ ರೀತಿಯ ಪರೀಕ್ಷೆಗಳನ್ನು ಮಾಡಲಾಗಿದ್ದು, ಅವರ ಹೃದಯದಲ್ಲಿ ಬ್ಲಾಕೇಜ್ ಇದೆ ಎನ್ನುವ ವಿಚಾರ ಗೊತ್ತಾಗಿದೆ. ಈಗ ವೈದ್ಯರು ಆ್ಯಂಜಿಯೋಪ್ಲಾಸ್ಟಿ ಮಾಡಿದ್ದು, ಸಯಾಜಿ ಆರೋಗ್ಯವಾಗಿದ್ದಾರೆ.

ಇತ್ತೀಚೆಗೆ ಸಯಾಜಿ ಅವರಿಗೆ ಅನಾರೋಗ್ಯ ಕಾಡಿತ್ತು. ಈಗ ಅವರಿಗೆ ಎದೆನೋವು ಕೂಡ ಕಾಣಿಸಿಕೊಂಡಿರುವುದರಿಂದ ಕುಟುಂಬದವರು ಆತಂಕಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ಹೃದಯಕ್ಕೆ ಸಂಬಂಧಿಸಿದ ವಿವಿಧ ಪರೀಕ್ಷೆಗಳನ್ನು ಮಾಡಲಾಗಿದೆ. ಅವರ ಹೃದಯ ರಕ್ತನಾಳದಲ್ಲಿ ಶೇ.99 ಬ್ಲಾಕೇಜ್ ಇರುವ ವಿಚಾರ ಗೊತ್ತಾಗಿದೆ. ಸದ್ಯ ಅವರ ಆರೋಗ್ಯ ಸುಧಾರಿಸಿದೆ. ಅವರನ್ನು ಎರಡು ದಿನಗಳಲ್ಲಿ ಡಿಸ್ಚಾರ್ಜ್ ಮಾಡಲಾಗುವುದು ಎಂದು ವೈದ್ಯರು ಹೇಳಿದ್ದಾರೆ.

Advertisement

ಸಯಾಜಿ ಆಸ್ಪತ್ರೆಗೆ ದಾಖಲಾದ ವಿಚಾರ ಕೇಳಿ ಫ್ಯಾನ್ಸ್ ಆತಂಕಕ್ಕೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ವಿಡಿಯೋ ಒಂದನ್ನು ಮಾಡಿ ಪೋಸ್ಟ್ ಮಾಡಿದ್ದರು. ‘ನಾನು ಆರೋಗ್ಯವಾಗಿದ್ದೇನೆ. ನನ್ನ ಬಗ್ಗೆ ಕಾಳಜಿವಹಿಸುವ ಎಲ್ಲಾ ಅಭಿಮಾನಿಗಳು ಚಿಂತಿಸೋದು ಬೇಡ. ನಾನು ಶೀಘ್ರವೇ ನಿಮ್ಮನ್ನು ಮನರಂಜಿಸುತ್ತೇನೆ’ ಎಂದಿದ್ದಾರೆ ಸಯಾಜಿ.

Advertisement
Tags :
angioplastyLatestNewsNewsKarnatakasayaji shindeTELUGU ACTOR
Advertisement
Next Article