ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮಹಿಳೆಯನ್ನು ಗ್ಯಾರೇಜ್‌ನಲ್ಲಿ ಕೂಡಿ ಹಾಕಿ ಅತ್ಯಾಚಾರವೆಸಗಿದ ರ‍್ಯಾಪರ್ ಬಂಧನ

ಐದು ವರ್ಷಗಳ ಹಿಂದೆ ಮಹಿಳೆಯನ್ನು ಅಪಹರಿಸಿ ಒತ್ತೆಯಾಳಾಗಿ ಇಟ್ಟುಕೊಂಡಿದ್ದಕ್ಕಾಗಿ ಟೆಕ್ಸಾಸ್‌ನ ವ್ಯಕ್ತಿ ಲೀ ರಾಪರ್ ಕಾರ್ಟರ್ ಎಂಬಾತನನ್ನು ಬಂಧಿಸಲಾಗಿದೆ. 52 ವರ್ಷದ ಮಹಿಳೆ ಗರ್ಭಿಣಿಯಾಗಿದ್ದಾಗ ಕಾರ್ಟರ್ ಬೀದಿಯಿಂದ ಆಕೆಯನ್ನು ಅಪಹರಿಸಿದ್ದು, ಆತನ ವಿರುದ್ಧ ಕೇಸ್‌ ದಾಖಲಾಗಿದೆ.
02:34 PM Jan 08, 2024 IST | Ashitha S

ಟೆಕ್ಸಾಸ್ : ಐದು ವರ್ಷಗಳ ಹಿಂದೆ ಮಹಿಳೆಯನ್ನು ಅಪಹರಿಸಿ ಒತ್ತೆಯಾಳಾಗಿ ಇಟ್ಟುಕೊಂಡಿದ್ದಕ್ಕಾಗಿ ಟೆಕ್ಸಾಸ್‌ನ ವ್ಯಕ್ತಿ ಲೀ ರಾಪರ್ ಕಾರ್ಟರ್ ಎಂಬಾತನನ್ನು ಬಂಧಿಸಲಾಗಿದೆ. 52 ವರ್ಷದ ಮಹಿಳೆ ಗರ್ಭಿಣಿಯಾಗಿದ್ದಾಗ ಕಾರ್ಟರ್ ಬೀದಿಯಿಂದ ಆಕೆಯನ್ನು ಅಪಹರಿಸಿದ್ದು, ಆತನ ವಿರುದ್ಧ ಕೇಸ್‌ ದಾಖಲಾಗಿದೆ.

Advertisement

ಹೂಸ್ಟನ್‌ನಲ್ಲಿರುವ ಕಾರ್ಟರ್‌ನ ಮನೆಗೆ ಹತ್ತಿರದಲ್ಲಿದ್ದ ಗ್ಯಾರೇಜ್‌ನಲ್ಲಿ ಮಹಿಳೆಯನ್ನು ಲಾಕ್ ಮಾಡಲಾಗಿದ್ದನ್ನು  ಪೊಲೀಸರು ಪತ್ತೆ ಮಾಡಿದರು. ಎಪ್ರಿಲ್ 7, 2023 ರಂದು ಬಹಿರಂಗಪಡಿಸಿದ ದಾಖಲೆಗಳ ಪ್ರಕಾರ, ಹೂಸ್ಟನ್‌ನ 5251 ಪೆರ್ರಿ ಸ್ಟ್ರೀಟ್‌ಗೆ ಹೋಗುತ್ತಿರುವಾಗ ಹೂಸ್ಟನ್ ಪೊಲೀಸರು ಗ್ಯಾರೇಜ್‌ನಿಂದ ಧ್ವನಿ ಕೇಳಿದರು ಎಂದು ಹೇಳಲಾಗಿದೆ.

ಸಂತ್ರಸ್ತೆ ಕಾರ್ಟರ್‌ನ ಲ್ಯಾಪ್‌ಟಾಪ್ ಬಳಸಿದ್ದು ಪೊಲೀಸರನ್ನು ಸಂಪರ್ಕಿಸಲು ಟೆಕ್ಸ್ಟ್ ನೌ ಅಪ್ಲಿಕೇಶನ್ ಅನ್ನು ಬಳಸಿದರು. ಹೀಗಾಗಿ ಪೊಲೀಸರು ಆಕೆಯನ್ನು ರಕ್ಷಿಸಲು ಸಾಧ್ಯವಾಗಿದೆ. ಇನ್ನು ಕಾರ್ಟರ್‌ ಒಂದು ಕೊಣೆಯಲ್ಲಿ ಆಕೆಯನ್ನು ಇರಿಸಿದ್ದು ಅಲ್ಲಿ ಮಾದಕವಸ್ತುಗಳ ರಾಶಿ ಹಾಗು ನಾಯಿಯೊಂದು ಇರುವುದು ಕಂಡು ಬಂದಿದೆ. ಆಕೆಗೆ ಕಾರ್ಟರ್‌ ಮಾದಕದ್ರವ್ಯಗಳನ್ನು ನೀಡಿ ಆಕೆಯನ್ನು ಅತ್ಯಾಚಾರವೆಸಗಿರುವುದು ತಿಳಿದುಬಂದಿದೆ.

Advertisement

ಸದ್ಯ ಆಕೆಯನ್ನು ರಕ್ಷಿಸಿರುವ ಪೊಲೀಸರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಇತ್ತ ಕಾರ್ಟರ್‌ ನನ್ನು ಹ್ಯಾರಿಸ್‌ ನ ಕೌಂಟಿ ಜೈಲಿನಲ್ಲಿ ಇರಿಸಲಾಗಿದೆ ಎಂದು ವರದಿಯಾಗಿದೆ.

Advertisement
Tags :
crimeindiaLatestNewsNewsKannadaPOLICEಅತ್ಯಾಚಾರಗ್ಯಾರೇಜ್‌ರಾಪರ್ ಕಾರ್ಟರ್
Advertisement
Next Article