ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಬಿಜೆಪಿಯವರು 5 ಸಾವಿರ ಕೋಟಿ ರೂ. ಖರ್ಚುಮಾಡಿ 500 ಶಾಸಕರನ್ನು ಖರೀದಿಸಿದ್ದಾರೆ: ಸಚಿವ ಲಾಡ್‌

ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂಬ ಬಿಜೆಪಿ ನಾಯಕರು ಹೇಳಿಕೆ ಕುರಿತು ಸಚಿವ ಸಂತೋಷ್ ಲಾಡ್, ಪ್ರತಿಕ್ರಿಯೆ ನೀಡಿದ್ದಾರೆ.
10:23 PM Nov 20, 2023 IST | Ashika S

ಮಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂಬ ಬಿಜೆಪಿ ನಾಯಕರು ಹೇಳಿಕೆ ಕುರಿತು ಸಚಿವ ಸಂತೋಷ್ ಲಾಡ್, ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಸರ್ಕಾರವನ್ನು ಕೆಡವುವಲ್ಲಿ ಬಿಜೆಪಿಯವರು ಅನುಭವಿಗಳು ಎಂದು ಹೇಳಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ಸರ್ಕಾರ ಬೀಳುತ್ತದೆ ಎಂಬಂತಹ ಹೇಳಿಕೆ ನೀಡುವುದು ಬಿಜೆಪಿಯವರ ಅಭ್ಯಾಸ. 5 ಸಾವಿರ ಕೋಟಿ ಖರ್ಚು ಮಾಡಿ ಈವರೆಗೆ 500 ಶಾಸಕರನ್ನು ಖರೀದಿ ಮಾಡಿದ್ದಾರೆ. ಈ ರೀತಿಯ ವ್ಯವಹಾರ ಮಾಡಿ ಅವರಿಗೆ ಅಭ್ಯಾಸವಿದೆ ಎಂದು ಹೇಳಿದ್ದಾರೆ.

ಕಳೆದ ಬಾರಿ 16 ಶಾಸಕರನ್ನು ಹೇಗೆ ಕರೆದುಕೊಂಡರು? ಅವರಿಗೆ ರೊಕ್ಕ ನೀಡಿ ಸರ್ಕಾರ ಬೀಳಿಸಿ ಅವರನ್ನು ಮಂತ್ರಿ ಮಾಡಿದರು. ಈ ಟ್ಯಾಲೆಂಟ್, ದುಡ್ಡು ಮೇಲೆ ಅವರಿಗೆ ನಂಬಿಕೆಯಿದೆ. ಪ್ರಜಾಪ್ರಭುತ್ವ ಮೌಲ್ಯಗಳನ್ನು ಗಾಳಿಗೆ ತೂರುವ ಅನುಭವ ಬಿಜೆಪಿಯವರಿಗಿದೆ. 136 ಶಾಸಕರು ಆಯ್ಕೆಯಾಗಿರುವ ಪಾರ್ಟಿಯ ಸರ್ಕಾರವನ್ನು ಬೀಳಿಸುತ್ತೇವೆ ಅಂತಿದ್ದಾರೆ. ಆರು ತಿಂಗಳಿಂದ ಇದನ್ನು ನಾವು ಕೇಳುತ್ತಿದ್ದೇವೆ. ಇದು ಬಿಟ್ಟು ಅವರಿಗೆ ಬೇರೇನೂ ಗೊತ್ತಿಲ್ವ ಎಂದು ಕೇಳಿದರು.

Advertisement

Advertisement
Tags :
LatetsNewsNewsKannadaಕಾಂಗ್ರೆಸ್ನಾಯಕಬಿಜೆಪಿರಾಜ್ಯಸಂತೋಷ್ ಲಾಡ್ಸರ್ಕಾರ
Advertisement
Next Article