For the best experience, open
https://m.newskannada.com
on your mobile browser.
Advertisement

ಡಿ ಬಾಸ್ ದರ್ಶನ್ ಬಹು ನಿರೀಕ್ಷಿತ ಡೆವಿಲ್ ಚಿತ್ರದ ಮೇಕಿಂಗ್ ಔಟ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹು ನಿರೀಕ್ಷಿತ ಡೆವಿಲ್ ಚಿತ್ರದ ಮೇಕಿಂಗ್‌ ರಿಲೀಸ್ ಆಗಿದೆ. ಸಿನಿಮಾದ ತೆರೆ ಹಿಂದಿನ ಗ್ಲಿಂಪ್ಸ್ ಇದಾಗಿದೆ. ಸ್ಕ್ರಿಪ್ಟ್ ಟು ಸ್ಕ್ರೀನ್ ಅನ್ನುವ ಹಾಗೆ ಸಿನಿಮಾದ ಕೆಲವು ವಿಷಯಗಳು ಇಲ್ಲಿ ಮೇಕಿಂಗ್‌ ರೂಪದಲ್ಲಿಯೇ ಕ್ಯಾಪ್ಚರ್ ಆಗಿವೆ.
01:09 PM May 10, 2024 IST | Ashitha S
ಡಿ ಬಾಸ್ ದರ್ಶನ್ ಬಹು ನಿರೀಕ್ಷಿತ ಡೆವಿಲ್ ಚಿತ್ರದ ಮೇಕಿಂಗ್ ಔಟ್

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹು ನಿರೀಕ್ಷಿತ ಡೆವಿಲ್ ಚಿತ್ರದ ಮೇಕಿಂಗ್‌ ರಿಲೀಸ್ ಆಗಿದೆ. ಸಿನಿಮಾದ ತೆರೆ ಹಿಂದಿನ ಗ್ಲಿಂಪ್ಸ್ ಇದಾಗಿದೆ. ಸ್ಕ್ರಿಪ್ಟ್ ಟು ಸ್ಕ್ರೀನ್ ಅನ್ನುವ ಹಾಗೆ ಸಿನಿಮಾದ ಕೆಲವು ವಿಷಯಗಳು ಇಲ್ಲಿ ಮೇಕಿಂಗ್‌ ರೂಪದಲ್ಲಿಯೇ ಕ್ಯಾಪ್ಚರ್ ಆಗಿವೆ.

Advertisement

ಸಿನಿಮಾ ತಂಡವೇ ಈ ಒಂದು ಡೆವಿಲ್ ಮೇಕಿಂಗ್ ಗ್ಲಿಂಪ್ಸ್ ಬಿಟ್ಟಿದೆ. ಈ ಒಂದು ವಿಡಿಯೋದಲ್ಲಿ ದರ್ಶನ್ ಪಾತ್ರದ ಖದರ್ ಹೇಗಿತ್ತೋ ಅನ್ನೋದು ತಿಳಿಯುತ್ತದೆ. ಚಿತ್ರದ ಮೊದಲ ಗ್ಲಿಂಪ್ಸ್ ನೋಡಿದವ್ರು ಈ ಮೇಕಿಂಗ್ ವಿಡಿಯೋ ನೋಡಿದ್ರೆ ಸಾಕು, ಸಿನಿಮಾದ ಫಸ್ಟ್ ಲುಕ್ ಗ್ಲಿಂಪ್ಸ್ ಹೇಗೆ ತಯಾರಾಗಿದೆ ಅನ್ನೋದು ತಿಳಿಯುತ್ತಿದೆ. ವಿಶೇಷವಾಗಿ ಇಲ್ಲಿ ಕ್ಯಾಮರಾಮನ್, ಡೈರೆಕ್ಟರ್, ದರ್ಶನ್ ಮತ್ತು ತಂಡದ ಇತರ ಸದಸ್ಯರು ಇಲ್ಲಿದ್ದಾರೆ.

Advertisement

ಇನ್ನು ಡೆವಿಲ್ ಚಿತ್ರದ ನಿರೀಕ್ಷೆ ಜಾಸ್ತಿ ಇದೆ. ಈ ಸಿನಿಮಾದಲ್ಲಿ ದರ್ಶನ್ ವಿಲನ್ ಆಗಿದ್ದಾರೆ. ಆದರೆ, ಟೈಟಲ್‌ ಅಲ್ಲಿ ವಿಲನ್ ದಿ ಹೀರೋ ಅಂತಲೇ ಹೇಳಿದೆ. ಹಾಗಾಗಿಯೇ ದರ್ಶನ್ ಇಲ್ಲಿ ವಿಲನ್ ಕೂಡ ಹೌದು. ಹೀರೂ ಕೂಡ ಹೌದು ಅನ್ನೋ ಫೀಲ್ ಬರುತ್ತದೆ. ಆದರೆ ಡೈರೆಕ್ಟರ್ ಮಿಲನ ಪ್ರಕಾಶ್ ಈ ಬಗ್ಗೆ ಹೆಚ್ಚಿಗೆ ಏನೂ ಹೇಳಿಕೊಂಡಿಲ್ಲ. ಇನ್ನು ಈ ಸಿನಿಮಾ ಈ ವರ್ಷದ ಕೊನೆಯಲ್ಲಿ ಬರಬಹುದು ಎಂದು ಅಂದಾಜಿಸಲಾಗಿದೆ.

Advertisement
Tags :
Advertisement