ಲವ್ ಮ್ಯಾರೇಜ್ ಆದ್ರೂ ಗಂಡನ ಖಾಸಗಿ ಭಾಗ ಸುಟ್ಟು ಕಾಟ ಕೊಡ್ತಿದ್ದ ಪತ್ನಿ !
ಲಖನೌ: ಮುಸ್ಲಿಂ ಮಹಿಳೆಯೊಬ್ಬಳು ತನ್ನ ಗಂಡನಿಗೆ ಚಿತ್ರಹಿಂಸೆ ನೀಡಿ, ಆತನ ಖಾಸಗಿ ಭಾಗಗಳಿಗೆ ಹಾನಿ ಮಾಡಿದ್ದಾಳೆ. ಪತಿಯನ್ನು ಬೆತ್ತಲೆ ಮಾಡಿ, ಮಂಚದ ಮೇಲೆ ಮಲಗಿಸಿ, ಕೈ-ಕಾಲುಗಳನ್ನು ಕಟ್ಟಿ ಹಾಕಿ ಕ್ರೂರವಾಗಿ ನಡೆಸಿಕೊಂಡಿದ್ದಾಳೆ. ಎಷ್ಟೇ ಕಿರುಚಿದರು, ಬೇಡಿಕೊಂಡರು, ಮನುಷ್ಯತ್ವವಿಲ್ಲದಂತೆ ಕಾಟ ನೀಡಿದ್ದಾಳೆ.
ಪತಿಯನ್ನು ಮಂಚಕ್ಕೆ ಕಟ್ಟಿ ಹಾಕಿ, ಅವಳಿಗೆ ಹೇಗೆ ಬೇಕು ಹಾಗೆ ನಡೆಸಿಕೊಳ್ಳುತ್ತಿದ್ದಳು, ಮಂಚದಲ್ಲಿ ಅವನ ಜತೆಗೆ ಮಲಗುವುದು, ಸಿಗರೇಟ್ ಸೇದುತ್ತಿದ್ದಳು, ಮದ್ಯಪಾನ ಕೂಡ ಮಾಡುತ್ತಿದ್ದಳು, ಇದರ ಮಧ್ಯೆ ಪತಿಗೆ ಚಿತ್ರಹಿಂಸೆ ಕೂಡ ನೀಡುತ್ತಿದ್ದಳು ಎಂದು ಹೇಳಲಾಗಿದೆ. ಪತಿಯ ಖಾಸಗಿ ಭಾಗಕ್ಕೆ ಮುಟ್ಟಿ ಚಿತ್ರಹಿಂಸೆಯನ್ನು ನೀಡುತ್ತಿದ್ದಳು. ಇದರಿಂದ ಸಮಾಧಾನವಾಗದಿದ್ದಾಗ ಪತಿಯ ಖಾಸಗಿ ಅಂಗದ ಮೇಲೆ ಚಾಕುವಿನಿಂದ ಗಾಯ ಮಾಡುತ್ತಿದ್ದಳು ಎಂದು ಪೊಲೀಸರು ಮುಂದೆ ಆತ ಹೇಳಿಕೊಂಡಿದ್ದಾನೆ.
ಆಕೆ ಹಿಂಸೆ ನೀಡಿದ್ದಳು ಎಂಬುದಕ್ಕೆ ಸಿಸಿಟಿವಿ ಕೂಡ ಸಾಕ್ಷಿಯಾಗಿದೆ. ಪತಿ ಹಾಗೂ ಸಿಸಿ ಟಿವಿ ವಿಡಿಯೋ ಆಧಾರದ ಮೇಲೆ ಮಹಿಳೆಯ ವಿರುದ್ಧ ದೂರು ದಾಖಲಿಸಿಕೊಂಡಿದ್ದು, ಆಕೆಯನ್ನು ಬಂಧಿಸಲಾಗಿದೆ. ಗಂಡನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇವರಿಬ್ಬರದ್ದು ಪ್ರೇಮ ವಿವಾಹ ಎಂದು ಹೇಳಲಾಗಿದೆ. ಇಬ್ಬರ ಕುಟುಂಬ ಒಪ್ಪಿಗೆಯ ನಂತರ ಮುಸ್ಲಿಂ ಪದ್ಧತಿಯಂತೆ 17 ನವೆಂಬರ್ 2023 ರಂದು ವಿವಾಹವಾಗಿದ್ದಾರೆ. ಆತನ ತಾಯಿ ಕೂಡ ತನ್ನ ಸೊಸೆ ನೀಡುತ್ತಿದ್ದ ಚಿತ್ರಹಿಂಸೆಯ ಬಗ್ಗೆ ಪೊಲೀಸರಿಗೆ ಹೇಳಿದ್ದಾರೆ. ಮಲಗುವ ಕೋಣೆಯಲ್ಲಿ ಅವನೊಂದಿಗೆ ಅಸಹ್ಯಕರ ಕೆಲಸಗಳನ್ನು ಮಾಡುತ್ತಿದ್ದಳು.ಇದರಿಂದ ನೊಂದು ಮಗ ಮಲಗುವ ಕೋಣೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ, ಸೊಸೆಯ ದುಷ್ಕೃತ್ಯ ಬಯಲಿಗೆಳೆದಿದ್ದಾಳೆ.