For the best experience, open
https://m.newskannada.com
on your mobile browser.
Advertisement

ಮೂರು "ಖಾನ್‌"ರನ್ನು ಸೇರಿಸಲು ಸಾಧ್ಯವಿಲ್ಲ ಎಂದಿದ್ದ ಶಾರುಖ್‌: ಆದ್ರೆ ಈಗ ?

ಬೇಟಾ... ಚಡ್ಡಿ, ಬನಿಯನ್‌ ಮಾರಿದ್ರೂ ಮೂರು ಖಾನ್‌ರನ್ನು ಒಟ್ಟಿಗೇ ಸೇರಿಸಲು ಯಾರಿಂದಲೂ ಸಾಧ್ಯವಿಲ್ಲ. ಅಂಥ ತಾಕತ್ತು ಯಾರಿಗೂ ಇಲ್ಲ, ಅಷ್ಟು ಹಣವನ್ನು ಹೊಂದಿಸಲು ಯಾರಿಗೂ ಸಾಧ್ಯವಿಲ್ಲ ಎಂದು ಕೆಲ ವರ್ಷಗಳ ಹಿಂದೆ ಬಾಲಿವುಡ್‌ ನಟ ಶಾರುಖ್‌ ಖಾನ್‌ ಹೇಳಿದ್ದರು.
04:41 PM Mar 04, 2024 IST | Ashitha S
ಮೂರು  ಖಾನ್‌ ರನ್ನು ಸೇರಿಸಲು ಸಾಧ್ಯವಿಲ್ಲ ಎಂದಿದ್ದ ಶಾರುಖ್‌  ಆದ್ರೆ ಈಗ

ಜಾಮ್‌ ನಗರ್: ಬೇಟಾ... ಚಡ್ಡಿ, ಬನಿಯನ್‌ ಮಾರಿದ್ರೂ ಮೂರು ಖಾನ್‌ರನ್ನು ಒಟ್ಟಿಗೇ ಸೇರಿಸಲು ಯಾರಿಂದಲೂ ಸಾಧ್ಯವಿಲ್ಲ. ಅಂಥ ತಾಕತ್ತು ಯಾರಿಗೂ ಇಲ್ಲ, ಅಷ್ಟು ಹಣವನ್ನು ಹೊಂದಿಸಲು ಯಾರಿಗೂ ಸಾಧ್ಯವಿಲ್ಲ ಎಂದು ಕೆಲ ವರ್ಷಗಳ ಹಿಂದೆ ಬಾಲಿವುಡ್‌ ನಟ ಶಾರುಖ್‌ ಖಾನ್‌ ಹೇಳಿದ್ದರು.

Advertisement

ಆ ಮೂಲಕ ತಮ್ಮನ್ನು ಸೇರಿದಂತೆ ಸಲ್ಮಾನ್‌ ಖಾನ್‌ ಮತ್ತು ಆಮೀರ್‌ ಖಾನ್‌ ಅವರನ್ನು ಒಟ್ಟಿಗೇ ಸೇರಿಸಲು ಸಾಧ್ಯವೇ ಇಲ್ಲ ಎಂದಿದ್ದರು.

Advertisement

ಅಷ್ಟಕ್ಕೂ ಶಾರುಖ್‌ ಖಾನ್‌ ಸಿನಿಮಾದಲ್ಲಿ ಸಲ್ಮಾನ್‌ ಖಾನ್‌ ಅತಿಥಿ ಕಲಾವಿದರಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಮೂವರು ಖಾನ್‌ಗಳು ಒಂದೇ ಚಿತ್ರದಲ್ಲಿ ಕಾಣಿಸಿರಲಿಲ್ಲ. ಆದ್ರೆ ಇದೀಗ ಆಗಿದ್ದೇನು? ಯಾವ ನಿರ್ಮಾಪಕರು, ನಿರ್ದೇಶಕರಿಗೂ ಸಾಧ್ಯವಾಗದ ಕೆಲಸವನ್ನು ಮುಕೇಶ್‌ ಅಂಬಾನಿ ಮಾಡಿ ತೋರಿಸಿದ್ದಾರೆ. ಈ ಮೂಲಕ ಶಾರುಖ್‌ ಖಾನ್‌ ಅವರ ಮಾತಿಗೆ ತಿರುಗೇಟು ನೀಡಿದ್ದಾರೆ.

ಇದರ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಸಕತ್‌ ಕಮೆಂಟ್‌ಗಳು ಬರುತ್ತಿದ್ದು, ಶಾರುಖ್‌ ಖಾನ್‌ ಟ್ರೋಲ್‌ಗೆ ಒಳಗಾಗುತ್ತಿದ್ದಾರೆ! ಬಾಲಿವುಡ್‌ ಬಾದ್‌ಶಾಹ್‌ನ ಸೊಕ್ಕು ಈಗ ಹೇಗೆ ಕರಗಿತು ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.

ಹೌದು. . ಮುಕೇಶ್‌ ಅಂಬಾನಿ ಅವರ ಪುತ್ರಿ ಅನಂತ್‌ ಅಂಬಾನಿಯವರ ಮದುವೆಯಲ್ಲಿ ಇದೀಗ ಸುಳ್ಳಾಗಿದೆ. ಇದನ್ನು ಸಾಬೀತು ಮಾಡಿ ತೋರಿಸಿದ್ದಾರೆ ಮುಕೇಶ್‌ ಅಂಬಾನಿ. ಅಂಬಾನಿ ಕುಟುಂಬದಲ್ಲಿ ಯಾವುದೇ ಸಮಾರಂಭ ನಡೆದರೂ ಶಾರುಖ್ ಖಂಡಿತಾ ಇರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಅನಂತ್-ರಾಧಿಕಾ ಮದುವೆಯ ಪೂರ್ವದಲ್ಲಿ ಕಿಂಗ್ ಖಾನ್ ಕೂಡ ಕಾಣಿಸಿಕೊಂಡಿದ್ದರು.

ಒಂದು ವಿಡಿಯೋದಲ್ಲಿ ಶಾರುಖ್ ಖಾನ್ ವೇದಿಕೆಗೆ ಬಂದ ಕೂಡಲೇ ಜೈ ಶ್ರೀರಾಮ್ ಘೋಷಣೆಗಳನ್ನು ಕೂಗುತ್ತಿದ್ದಾರೆ. ಆದಾಗ್ಯೂ, ಅವರು ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ಅವರೊಂದಿಗೆ ನಾಟು-ನಾಟು ಹಾಡಿಗೆ ಹುಕ್ ಸ್ಟೆಪ್ ಹಾಕುವ ವೇದಿಕೆಯಲ್ಲಿ ಕಾಣಿಸಿಕೊಂಡಾಗ ಅತ್ಯಂತ ಆಕರ್ಷಕ ಕ್ಷಣ ಬಂದಿತು. ಈ ವಿಡಿಯೋದಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿದೆ.

Advertisement
Tags :
Advertisement