For the best experience, open
https://m.newskannada.com
on your mobile browser.
Advertisement

ಇಂದು (ಮೇ 04) ಅಂತಾರಾಷ್ಟ್ರೀಯ ಅಗ್ನಿಶಾಮಕ ದಿನ

ಜನ ಸಮುದಾಯವನ್ನು ರಕ್ಷಿಸಲು ತಮ್ಮ ಪ್ರಾಣವನ್ನು ಪಣಕ್ಕಿಡುವ ಅಗ್ನಿ ಶಾಮಕದಳದ ವೀರರನ್ನು ಗೌರವಿಸಲು ಇಂದು ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಅಗ್ನಿಶಾಮಕ ದಿನವನ್ನು ಆಚರಿಸಲಾಗುತ್ತದೆ.
11:50 AM May 04, 2024 IST | Chaitra Kulal
ಇಂದು  ಮೇ 04  ಅಂತಾರಾಷ್ಟ್ರೀಯ ಅಗ್ನಿಶಾಮಕ ದಿನ

ಜನ ಸಮುದಾಯವನ್ನು ರಕ್ಷಿಸಲು ತಮ್ಮ ಪ್ರಾಣವನ್ನು ಪಣಕ್ಕಿಡುವ ಅಗ್ನಿ ಶಾಮಕದಳದ ವೀರರನ್ನು ಗೌರವಿಸಲು ಇಂದು ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಅಗ್ನಿಶಾಮಕ ದಿನವನ್ನು ಆಚರಿಸಲಾಗುತ್ತದೆ.

Advertisement

ಇವರು ಜನ ಸಮುದಾಯಗಳನ್ನು ರಕ್ಷಿಸುವ ಜೊತೆಗೆ ವಿವಿಧ ಪರಿಸ್ಥಿತಿಗಳಲ್ಲಿ ಅಪಾಯಕ್ಕೆ ಸಿಲುಕಿರುವವರ ಜೀವಗಳನ್ನು ಉಳಿಸುವ ಕೆಲಸವನ್ನೂ ನಿರ್ವಹಿಸುತ್ತಾರೆ.

ಈ ದಿನವನ್ನು ಅಗ್ನಿಶಾಮಕ ದಳದ ಪೋಷಕ ಸಂತ ಸೇಂಟ್ ಫ್ಲೋರಿಯನ್ ಅವರ ಸ್ಮರಣಾರ್ಥ ಆಚರಿಸಲಾಗುತ್ತಿದೆ. ಸೇಂಟ್ ಫ್ಲೋರಿಯನ್ ಅನ್ನು ರೋಮನ್ ಸಾಮ್ರಾಜ್ಯದಲ್ಲಿ ಅಗ್ನಿಶಾಮಕ ದಳದ ಮೊದಲ ಕಮಾಂಡರ್ ಎಂದು ಪರಿಗಣಿಸಲಾಗಿದೆ. ಅವರು ಪ್ರಾಚೀನ ರೋಮನ್ ನಗರವಾದ ನೊರಿಕಮ್ ನಲ್ಲಿ ಅಗ್ನಿಶಾಮಕ ಘಟಕದ ನಾಯಕರಾಗಿದ್ದರು.

Advertisement

ಆಸ್ಟ್ರೇಲಿಯಾದಲ್ಲಿ ನಡೆದ ದುರಂತ ಘಟನೆಯ ಬಳಿಕ ಅಗ್ನಿ ಶಾಮಕ ದಿನವನ್ನು ಆಚರಿಸಲಾಯಿತು. 1998ರ ಡಿಸೆಂಬರ್ 2ರಂದು ವಿಕ್ಟೋರಿಯಾದ ಲಿಂಟನ್‌ನಲ್ಲಿ ಭೀಕರ ಕಾಡ್ಗಿಚ್ಚು ಉಂಟಾಗಿತ್ತು. ಈ ಸಂದರ್ಭದಲ್ಲಿ ಐವರು ಅಗ್ನಿಶಾಮಕ ದಳದವರು ಪ್ರಾಣ ಕಳೆದುಕೊಂಡರು.

ಗೀಲಾಂಗ್ ಪಶ್ಚಿಮ ಅಗ್ನಿಶಾಮಕ ದಳದ ಸದಸ್ಯರಾಗಿದ್ದ ಗ್ಯಾರಿ ವ್ರೆಡೆವೆಲ್ಡ್ಟ್, ಕ್ರಿಸ್ಟೋಫರ್ ಇವಾನ್ಸ್, ಸ್ಟುವರ್ಟ್ ಡೇವಿಡ್ಸನ್, ಜೇಸನ್ ಥಾಮಸ್ ಮತ್ತು ಮ್ಯಾಥ್ಯೂ ಆರ್ಮ್ ಸ್ಟ್ರಾಂಗ್ ಅವರು ಈ ದುರ್ಘಟನೆಯಲ್ಲಿ ಸಾವನ್ನಪ್ಪಿದ್ದರು.

ಬಳಿಕ ಘಟನೆಯ ಮಹತ್ವವನ್ನು ತಿಳಿಸಲು ಅಂತಿಮವಾಗಿ ಅಂತಾರಾಷ್ಟ್ರೀಯ ಅಗ್ನಿಶಾಮಕ ದಿನದ ಆಚರಣೆಯ ಪ್ರಸ್ತಾಪಕ್ಕೆ ಕಾರಣವಾಯಿತು. ಆಸ್ಟ್ರೇಲಿಯನ್ ಅಗ್ನಿಶಾಮಕ ದಳದ ಜೆಜೆ ಎಡ್ಮಂಡ್ಸನ್ ಅವರು ಅಗ್ನಿಶಾಮಕ ದಳದವರಿಗೆ ಮೀಸಲಾದ ದಿನವನ್ನು ಸ್ಥಾಪಿಸುವ ಉಪಕ್ರಮದ ನೇತೃತ್ವ ವಹಿಸಿದ್ದರು.

ಎಡ್ಮಂಡ್ಸನ್ 1999 ರ ಹೊಸ ವರ್ಷದ ನಿರ್ಣಯದಂತೆ “ಎಲ್ಲಾ ಅಗ್ನಿಶಾಮಕ ದಳದವರಿಗೆ ಬೆಂಬಲ ಮತ್ತು ಗೌರವದ ಅಂತಾರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ದಿನವನ್ನು ಆಯೋಜಿಸಲು ಮತ್ತು ಇದನ್ನು ವಿಶ್ವಾದ್ಯಂತ ಸಂಘಟಿಸಬಹುದಾದ ದಿನಾಂಕವನ್ನು ಆಯೋಜಿಸಲು ನಿರ್ಧರಿಸಿದರು.

Advertisement
Tags :
Advertisement