For the best experience, open
https://m.newskannada.com
on your mobile browser.
Advertisement

ಇಂದು ವಿಶ್ವ ಏಡ್ಸ್‌ ದಿನ: ರೋಗ​ ಸೋಂಕಿತರಲ್ಲಿ ಕರ್ನಾಟಕಕ್ಕೆ ಎಷ್ಟನೇ ಸ್ಥಾನ ?

ಇಂದು ವಿಶ್ವ ಏಡ್ಸ್‌ ದಿನ. ಪ್ರತಿ ವರ್ಷ ಡಿಸೆಂಬರ್ 01 ರಂದು ವಿಶ್ವ ಏಡ್ಸ್ ದಿನವನ್ನು ಆಚರಣೆ ಮಾಡಲಾಗುತ್ತದೆ. ಜಗತ್ತಿನಲ್ಲಿ ವೈದ್ಯ ವಿಜ್ಞಾನಕ್ಕೆ ಸವಾಲಾಗಿರುವ ಸೋಂಕು ಎಂದರೆ ಅದು ಹೆಚ್‌.ಐ. ವಿ / ಏಡ್ಸ್. ಇದು ಇತಿಹಾಸದಲ್ಲೇ ಅತ್ಯಂತ ವಿನಾಶಕಾರಿ ಸಾಂಕ್ರಾಮಿಕ ರೋಗಗಳಲ್ಲಿ ಒಂದಾಗಿದೆ.
08:39 AM Dec 01, 2023 IST | Ashitha S
ಇಂದು ವಿಶ್ವ ಏಡ್ಸ್‌ ದಿನ  ರೋಗ​ ಸೋಂಕಿತರಲ್ಲಿ ಕರ್ನಾಟಕಕ್ಕೆ ಎಷ್ಟನೇ ಸ್ಥಾನ

ಇಂದು ವಿಶ್ವ ಏಡ್ಸ್‌ ದಿನ. ಪ್ರತಿ ವರ್ಷ ಡಿಸೆಂಬರ್ 01 ರಂದು ವಿಶ್ವ ಏಡ್ಸ್ ದಿನವನ್ನು ಆಚರಣೆ ಮಾಡಲಾಗುತ್ತದೆ. ಜಗತ್ತಿನಲ್ಲಿ ವೈದ್ಯ ವಿಜ್ಞಾನಕ್ಕೆ ಸವಾಲಾಗಿರುವ ಸೋಂಕು ಎಂದರೆ ಅದು ಹೆಚ್‌.ಐ. ವಿ / ಏಡ್ಸ್. ಇದು ಇತಿಹಾಸದಲ್ಲೇ ಅತ್ಯಂತ ವಿನಾಶಕಾರಿ ಸಾಂಕ್ರಾಮಿಕ ರೋಗಗಳಲ್ಲಿ ಒಂದಾಗಿದೆ.

Advertisement

ಹೀಗಾಗಿ ಈ ಸೋಂಕಿಗೊಳಗಾದವರು ನಡೆಸುವ ಹೋರಾಟದ ಯಶಸ್ಸಿಗೆ ಧೈರ್ಯ ತುಂಬಲು ಸಂಕಲ್ಪವನ್ನು ಮಾಡುವಂತಹ ಮಹತ್ವದ ದಿನ ವಿಶ್ವ ಏಡ್ಸ್ ದಿನವಾಗಿದೆ. ಏಡ್ಸ್‌ ಸೋಂಕನ್ನು ಮೊಟ್ಟ ಮೊದಲ ಬಾರಿಗೆ 1981ರಲ್ಲಿ ಅಮೆರಿಕದಲ್ಲಿ ಗುರುತಿಸಲಾಯಿತು. ಭಾರತದಲ್ಲಿ 1986ರಲ್ಲಿ ಚೆನ್ನೈನಲ್ಲಿ ಪತ್ತೆ ಮಾಡಲಾಯಿತು. ಏಡ್ಸ್‌ಗೆ ಕಾರಣವಾದ ವೈರಸ್‌ ಹೆಚ್‌ಐವಿ ಇದನ್ನು ಮೊಟ್ಟಮೊದಲ ಬಾರಿಗೆ 1983ರಲ್ಲಿ ಫ್ರೆಂಚ್ ವಿಜ್ಞಾನಿಗಳು ಪತ್ತೆ ಹಚ್ಚಿದರು.

ಇಲ್ಲಿಯವರೆಗೂ ಸುಮಾರು 35 ಮಿಲಿಯನ್‌ಗಿಂತಲೂ ಹೆಚ್ಚು ಜನರು ಹೆಚ್‌ಐವಿ ಅಥವಾ ಏಡ್ಸ್ ಸಂಬಂಧಿತ ಕಾಯಿಲೆಗಳಿಂದ ಸಾವನ್ನಪ್ಪಿದ್ದಾರೆ. ಭಾರತದಲ್ಲಿ 1987 ರಲ್ಲಿ ಮೊದಲ ಏಡ್ಸ್‌ ಪ್ರಕರಣ ಪತ್ತೆಯಾಯಿತು.

Advertisement

ಇನ್ನು ಹೆಚ್‌ಐವಿ / ಏಡ್ಸ್‌ ಕಾರ್ಯ ಚಟುವಟಿಕೆಗಳಿಗೆ ಸಂಪನ್ಮೂಲ ಕೂಡಿಸುವುದು, ವ್ಯಕ್ತಿಗತ ಮತ್ತು ಸಮುದಾಯದಲ್ಲಿ ಈ ಸೋಂಕಿನಿಂದ ಉಂಟಾಗುತ್ತಿರುವ ಸಮಸ್ಯೆಗಳು ಮತ್ತು ಇದರ ಬಗ್ಗೆ ಜಾಗೃತಿ ಹೆಚ್ಚಿಸುವುದು ಹಾಗೂ ಹೆಚ್‌ಐವಿ ಸೋಂಕಿತರಾಗಿರುವರಿಗೆ ಬೆಂಬಲ ನೀಡುವುದು ಮತ್ತು ಅವರು ಅನುಭವಿಸುತ್ತಿರುವ ಕಳಂಕ ತಾರತಮ್ಯವನ್ನು ಕಡಿಮೆ ಮಾಡುವುದು ಹಾಗೂ ಹೆಚ್‌ಐವಿ ಏಡ್ಸ್‌ ಬೆಳವಣಿಗೆಯತ್ತ ದೃಷ್ಟಿ ಬೀರಿ, ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮಗಳತ್ತ ಪ್ರತಿಯೊಬ್ಬರ ಗಮನ ಸೇಳೆಯುವುದು ಇದರ ಮುಖ್ಯ ಉದ್ದೇಶವಾಗಿದೆ.

ವಿಶ್ವ ಏಡ್ಸ್‌ ದಿನ ಆಚರಣೆಯಂದು ಏಡ್ಸ್‌ / ಹೆಚ್‌ಐವಿ ಸೋಂಕಿನ ಕುರಿತು ಅರಿವು ಮೂಡಿಸುವುದು. ಮತ್ತು ಇದರಿಂದ ಹೇಗೆ ರಕ್ಷಣೆ ಪಡೆಯುವುದು, ಸುರಕ್ಷಿತವಾಗಿರಬೇಕು ಎನ್ನುವುದನ್ನ ತಿಳಿಸಿಕೊಡುವುದು. ಜಾಗೃತಿ ವಿರುದ್ಧದ ಹೋರಾಟವನ್ನು ಮತ್ತು ಹೆಚ್‌ಐವಿ / ಏಡ್ಸ್‌ನ ಸುತ್ತ ಸುತ್ತುವ ಶಿಕ್ಷಣವನ್ನು ಸುಧಾರಿಸಲು ಅವಶ್ಯಕತೆಯಿದೆ ಎಂದು ಸಾರ್ವಜನಿಕರಿಗೆ ನೆನಪಿಸುವುದು. ವಿಶ್ವಾದ್ಯಂತ ಹೆಚ್‌ಐವಿ ಯೊಂದಿಗೆ ವಾಸಿಸುವ ಲಕ್ಷಾಂತರ ಜನರೊಂದಿಗೆ ಒಗ್ಗಟ್ಟನ್ನು ತೋರಿಸಲು ಒಂದು ಅವಕಾಶವಾಗಿದೆ. ಈ ದಿನದಂದು ಹೆಚ್ಚಿನ ಜನರು ಕೆಂಪು ರಿಬ್ಬನ್ ಧರಿಸಿ ಏಡ್ಸ್ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.

ಇನ್ನು ಕರ್ನಾಟಕದ ವಿಚಾರಕ್ಕೆ ಬರುವುದಾದರೇ, ಏಡ್ಸ್ ರೋಗ​ ಸೋಂಕಿತರಲ್ಲಿ ಕರ್ನಾಟಕ 9ನೇ ಸ್ಥಾನದಲ್ಲಿದೆ. ರಾಷ್ಟ್ರೀಯ ಸರಾಸರಿಗಿಂತ ಕರ್ನಾಟಕದಲ್ಲಿ ಏಡ್ಸ್​ (HIV) ಸೋಂಕಿತರ ಸಂಖ್ಯೆ ಶೇ 0.29 ರಷ್ಟು ಹೆಚ್ಚಾಗಿದೆ. ರಾಷ್ಟ್ರೀಯ ಸರಾಸರಿ ಶೇ 0.22 ರಷ್ಟಿದೆ. ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ ದ ಅಂಕಿಅಂಶಗಳ ಪ್ರಕಾರ ಏಡ್ಸ್​ ರೋಗದಿಂದ ಬಳಲುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಶೇ 1.61 ಮೂಲಕ ನಾಗಾಲ್ಯಾಂಡ್ ಅಗ್ರಸ್ಥಾನದಲ್ಲಿದ್ದರೆ, ಕರ್ನಾಟಕವು 9ನೇ ಸ್ಥಾನದಲ್ಲಿದೆ. ದೇಶದಲ್ಲಿ ಹೆಚ್ಚಾಗಿ ಏಡ್ಸ್​ ರೋಗದಿಂದ ಬಳಲುತ್ತಿರುವವರು 15-49 ವರ್ಷದ ಒಳಗಿನವರು. ಕರ್ನಾಟಕದಲ್ಲಿ ಹೆಚ್​ಐವಿ ಟೆಸ್ಟ್​ ಪಾಸಿಟಿವಿಟಿ ರೇಟ್​ ಇಳಿಮುಖವಾಗುತ್ತಿದೆ. 2017ರಿಂದ ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ಕರ್ನಾಟಕದಲ್ಲಿ ಹೆಚ್​ಐವಿ ರೋಗ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ.

ಇತ್ತ ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಡ್ಸ್‌ ರೋಗಿಗಳ ಸಂಖ್ಯೆ 10,431ಯಿದೆ. ಈ ವರ್ಷ ಏಪ್ರಿಲ್‌ನಿಂದ ಅಕ್ಟೋಬರ್ ವರೆಗೆ 209 ಪ್ರಕರಣಗಳು ಪತ್ತೆಯಾಗಿವೆ. ಕಳೆದ 5 ವರ್ಷಗಳಲ್ಲಿ 300ಕ್ಕಿಂತ ಕಡಿಮೆ ರೋಗಿಗಳು ಇದ್ದಾರೆ. ಕಳೆದ 17 ವರ್ಷಗಳಲ್ಲಿ ಜಿಲ್ಲೆಯಲ್ಲಿ 7,49,494 ಮಂದಿ ಪರೀಕ್ಷೆಗೆ ಒಳಗಾದವರು ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಅವರು ಮಾಹಿತಿ ಒದಗಿಸಿದರು.

Advertisement
Tags :
Advertisement