ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಸಿಹಿ ಸುದ್ದಿ: ಪ್ಯಾಸೆಂಜರ್ ರೈಲಿನ ಟಿಕೆಟ್‌ ದರ ಇಳಿಕೆ

ರೈಲು ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಇಲಾಖೆ ಗುಡ್‌ನ್ಯೂಸ್ ನೀಡಿದೆ. ಮಹತ್ವದ ಪ್ರಕಟಣೆಯಲ್ಲಿ, ಭಾರತೀಯ ರೈಲ್ವೆಯು ಟಿಕೆಟ್ ದರಗಳನ್ನು ಕೋವಿಡ್ ಪೂರ್ವದ ಮಟ್ಟಕ್ಕೆ ಇಳಿಸಲು ನಿರ್ಧರಿಸಿದೆ.
02:46 PM Mar 01, 2024 IST | Ashitha S

ನವದೆಹಲಿ: ರೈಲು ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಇಲಾಖೆ ಗುಡ್‌ನ್ಯೂಸ್ ನೀಡಿದೆ. ಮಹತ್ವದ ಪ್ರಕಟಣೆಯಲ್ಲಿ, ಭಾರತೀಯ ರೈಲ್ವೆಯು ಟಿಕೆಟ್ ದರಗಳನ್ನು ಕೋವಿಡ್ ಪೂರ್ವದ ಮಟ್ಟಕ್ಕೆ ಇಳಿಸಲು ನಿರ್ಧರಿಸಿದೆ.

Advertisement

ರೈಲು ಟಿಕೆಟ್ ದರಗಳನ್ನು ಇಳಿಸಲು ನಿರ್ಧರಿಸಿರುವುದರಿಂದ ರೈಲ್ವೆ ಪ್ರಯಾಣಿಕರಿಗೆ ತುಸು ರಿಲೀಫ್ ನೀಡಿದಂತಾಗಿದ್ದು, ಕೊರೊನಾ ಸಾಂಕ್ರಾಮಿಕ ರೋಗದ ನಂತರ ಬಹುತೇಕ ವಸ್ತುಗಳಿಗೆ ಬೆಲೆ ಏರಿಕೆ ಆಗಿರುವುದರಿಂದ ಬೇಸತ್ತಿರುವ ರೈಲು ಪ್ರಯಾಣಿಕರಿಗೆ ರೈಲ್ವೆ ಇಲಾಖೆಯ ಈ ನಿರ್ಧಾರ ನೆಮ್ಮದಿ ತಂದಿದೆ. ಫೆ.27ರಿಂದಲೇ ಈ ಬೆಲೆ ಇಳಿಕೆ ನಿಯಮ ಅನ್ವಯವಾಗಿದೆ.

ಕೊರೊನಾ ಸಮಯದಲ್ಲಿ ಮೆಮು/ಡೆಮು ಮತ್ತು ಪ್ಯಾಸೆಂಜರ್‌ ರೈಲು ಪ್ರಯಾಣ ದರವನ್ನು ಹೆಚ್ಚಿಸಿದ್ದ ರೈಲ್ವೆ ಮಂಡಳಿ ಇದೀಗ ಕಡಿಮೆ ಮಾಡಿದ್ದು, ನೈಋುತ್ಯ ರೈಲ್ವೆಯ ಬೆಂಗಳೂರು ವಲಯದ 20 (ಹೋಗುವ - ಬರುವ) ಜೋಡಿ ಸ್ಥಳೀಯ ರೈಲು ಪ್ರಯಾಣ ದರವನ್ನು ಇಳಿಸಿದೆ. ಕೋವಿಡ್ ಸಮಯದಲ್ಲಿ ಪ್ಯಾಸೆಂಜರ್ ರೈಲುಗಳನ್ನು ಸ್ಥಗಿತಗೊಳಿಸಲಾಗಿತ್ತು.

Advertisement

ಆ ಸಮಯದಲ್ಲಿ ಪ್ಯಾಸೆಂಜರ್ ರೈಲಿನ ಕನಿಷ್ಠ ಟಿಕೆಟ್ ದರವನ್ನು 10 ರೂ.ನಿಂದ 30 ರೂ.ಗೆ ಹೆಚ್ಚಿಸಲಾಗಿತ್ತು. ಇದು ಎಕ್ಸ್‌ಪ್ರೆಸ್ ರೈಲುಗಳ ದರಕ್ಕೆ ಅನುಗುಣವಾಗಿತ್ತು. ಆದರೆ ಇದೀಗ ಈ ದರವನ್ನು ಇಳಿಕೆ ಮಾಡಲಾಗಿದ್ದು, ರೈಲು ಪ್ರಯಾಣಿಕರಿಗೆ ಹೊರೆ ಕಡಿಮೆಯಾಗಿದೆ.

ದರ ಕಡಿತದ ಉಪಕ್ರಮದ ಭಾಗವಾಗಿ, ಎಲ್ಲಾ ಮೇನ್‌ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ (MEMU) ರೈಲುಗಳು ಮತ್ತು 'ಶೂನ್ಯ'ದಿಂದ ಪ್ರಾರಂಭವಾಗುವ ಸಂಖ್ಯೆಗಳನ್ನು ಹೊಂದಿರುವ ರೈಲುಗಳಲ್ಲಿ ಸಾಮಾನ್ಯ ದರ್ಜೆಯ ದರಗಳನ್ನು ಸರಿಸುಮಾರು 50% ರಷ್ಟು ಕಡಿತಗೊಳಿಸಲಾಗಿದೆ. ಪ್ಯಾಸೆಂಜರ್ ರೈಲುಗಳೆಂದು ಈ ಹಿಂದೆ ವರ್ಗೀಕರಿಸಲಾದ ಎಲ್ಲಾ ರೈಲುಗಳಿಗೆ ಈ ದರ ಕಡಿತವು ಅನ್ವಯಿಸುತ್ತದೆ, ಅವುಗಳು ಈಗ ದೇಶದಾದ್ಯಂತ 'ಎಕ್ಸ್‌ಪ್ರೆಸ್ ವಿಶೇಷ' ಅಥವಾ MEMU ರೈಲುಗಳಾಗಿ ಕಾರ್ಯನಿರ್ವಹಿಸುತ್ತಿವೆ.

ಬದಲಾದ ದರಗಳು ಗುರುವಾರದಿಂದಲೇ ಜಾರಿಗೆ ಬಂದಿವೆ ಎಂದು ಕೇಂದ್ರ ರೈಲ್ವೆ ಪ್ರಯಾಣಿಕರ ಸಲಹಾ ಸಮಿತಿ ಸದಸ್ಯ ಶಿವನಾಥ ಬಿಜಾನಿ ತಿಳಿಸಿದ್ದಾರೆ.

 

Advertisement
Tags :
GOVERNMENTindiaIndian RailwayLatestNewsNewsKannadaTicket FareTRAINನವದೆಹಲಿ
Advertisement
Next Article