For the best experience, open
https://m.newskannada.com
on your mobile browser.
Advertisement

ಅಪಘಾತಕ್ಕೀಡಾದ ತುಕಾಲಿ ಸಂತೋಷ್ ಖರೀದಿಸಿದ್ದ ಹೊಸ ಕಾರು!

ಕನ್ನಡ ಬಿಗ್​ ಬಾಸ್​ 10ನೇ ಆವೃತ್ತಿಯ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದ ತುಕಾಲಿ ಸಂತೋಷ್ ಅವರ ಹೊಸ ಕಾರು ಅಪಘಾತಕ್ಕೀಡಾಗಿದೆ. ತುಕಾಲಿ ಸಂತೋಷ್ ಕೆಲ ದಿನಗಳ ಹಿಂದೆ ಕಿಯಾ ಕಂಪನಿಯ ಹೊಸ ಕಾರು ಖರೀದಿಸಿದ್ದರು. ಆದರೆ ಅವರ ಕಾರಿಗೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹೊನ್ನೇನಹಳ್ಳಿ ಬಳಿ ಆಟೋ ರಿಕ್ಷಾ ಡಿಕ್ಕಿ ಹೊಡೆದಿದ್ದು ಕಾರೂ ಹಾಗೂ ಆಟೋ ಜಖಂಗೊಂಡಿದೆ.
08:56 AM Mar 14, 2024 IST | Ashitha S
ಅಪಘಾತಕ್ಕೀಡಾದ ತುಕಾಲಿ ಸಂತೋಷ್ ಖರೀದಿಸಿದ್ದ ಹೊಸ ಕಾರು

ತುಮಕೂರು: ಕನ್ನಡ ಬಿಗ್​ ಬಾಸ್​ 10ನೇ ಆವೃತ್ತಿಯ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದ ತುಕಾಲಿ ಸಂತೋಷ್ ಅವರ ಹೊಸ ಕಾರು ಅಪಘಾತಕ್ಕೀಡಾಗಿದೆ. ತುಕಾಲಿ ಸಂತೋಷ್ ಕೆಲ ದಿನಗಳ ಹಿಂದೆ ಕಿಯಾ ಕಂಪನಿಯ ಹೊಸ ಕಾರು ಖರೀದಿಸಿದ್ದರು. ಆದರೆ ಅವರ ಕಾರಿಗೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹೊನ್ನೇನಹಳ್ಳಿ ಬಳಿ ಆಟೋ ರಿಕ್ಷಾ ಡಿಕ್ಕಿ ಹೊಡೆದಿದ್ದು ಕಾರೂ ಹಾಗೂ ಆಟೋ ಜಖಂಗೊಂಡಿದೆ.

Advertisement

ಅಪಘಾತದಲ್ಲಿ  ಆಟೋ ಚಾಲಕ ಜಗದೀಶ್ ಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಆ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ  ಮೃತಪಟ್ಟಿದ್ದಾರೆ.  ತುಕಾಲಿ ಸಂತೋಷ್​ ಅವರ ಕಾರು ಅಪಘಾತದ ಫೋಟೋಗಳು ಲಭ್ಯವಾಗಿವೆ. ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.

ತುಮಕೂರು ಜಿಲ್ಲೆಯ ಕುಣಿಗಲ್ ತಾ| ಹೊನ್ನೇನಹಳ್ಳಿ ಬಳಿ ಈ ಘಟನೆ ನಡೆದಿದೆ. ತುಮಕೂರು ಕಡೆಯಿಂದ ಕುಣಿಗಲ್ ಮಾರ್ಗವಾಗಿ ಹೊಳೆನರಸೀಪುರ ಕಡೆ ತುಕಾಲಿ ಸಂತೋಷ್ ಅವರು ಪತ್ನಿ ಮಾನಸಾ ಜೊತೆ ಪ್ರಯಾಣಿಸುತ್ತಿದ್ದರು. ಅದೇ ವೇಳೆ ಕುಣಿಗಲ್‌ನಿಂದ ಕುರುಡಿಹಳ್ಳಿಗೆ ಆಟೋ ಬರುತ್ತಿತ್ತು. ತುಕಾಲಿ ಸಂತೋಷ್ ಅವರ ಕಾರು ಆಟೋಗೆ ಡಿಕ್ಕಿ ಹೊಡೆದಿದೆ. ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.

Advertisement

Advertisement
Tags :
Advertisement