ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಸಲ್ಮಾನ್​ ಖಾನ್​ ಫಾರ್ಮ್​ಹೌಸ್​ಗೆ ನುಗ್ಗಲು ಯತ್ನಿಸಿದ ಇಬ್ಬರ ಬಂಧನ

ಇಬ್ಬರು ಯುವಕರು ಅನುಮಾನಾಸ್ಪದವಾಗಿ ಸಲ್ಮಾನ್​ ಖಾನ್​ ಅವರ ಫಾರ್ಮ್​ಹೌಸ್​ಗೆ ನುಗ್ಗಲು ಪ್ರಯತ್ನಿಸಿರುವ ಘಟನೆ  ಪನ್ವೇಲ್​ನಲ್ಲಿ ನಡೆದಿದೆ.
03:13 PM Jan 08, 2024 IST | Ashika S

ಮುಂಬೈ: ಇಬ್ಬರು ಯುವಕರು ಅನುಮಾನಾಸ್ಪದವಾಗಿ ಸಲ್ಮಾನ್​ ಖಾನ್​ ಅವರ ಫಾರ್ಮ್​ಹೌಸ್​ಗೆ ನುಗ್ಗಲು ಪ್ರಯತ್ನಿಸಿರುವ ಘಟನೆ  ಪನ್ವೇಲ್​ನಲ್ಲಿ ನಡೆದಿದೆ.

Advertisement

ಪನ್ವೇಲ್​ನಲ್ಲಿ  ಅವರ ಫಾರ್ಮ್​ಹೌಸ್​  ಕಾಂಪೌಂಡ್​ ಒಳಗೆ ನುಸುಳಲು ಪ್ರಯತ್ನಿಸುತ್ತಿದ್ದ ಇಬ್ಬರು ಸಿಕ್ಕಿ ಬಿದ್ದಿದ್ದಾರೆ. ಬಳಿಕ ಭದ್ರತಾ ಸಿಬ್ಬಂದಿಯು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಅಭಿಮಾನಿಗಳು ಎಂದು ಹೇಳಿಕೊಂಡು ಬಂದ ಈ ಇಬ್ಬರನ್ನು ಅಜೇಶ್​ ಕುಮಾರ್​ ಓಂಪ್ರಕಾಶ್​ ಗಿಲ್​ ಹಾಗೂ ಗುರುಸೇವಕ್​ ಸಿಂಗ್​ ಎಂದು ಗುರುತಿಸಿಲಾಗಿದೆ.

Advertisement

ಅವರಿಬ್ಬರ ಆಧಾರ್​ ಕಾರ್ಡ್​ ಪರಿಶೀಲನೆ ಮಾಡಿದಾಗ ಅವು ನಕಲಿ ಆಧಾರ್​ ಕಾರ್ಡ್​ ಎಂಬುದು ತಿಳಿದು ಬಂದಿದೆ. ಮಹೇಶ್​ ಕುಮಾರ್​ ಮತ್ತು ವಿನೋದ್​ ಕುಮಾರ್​ ಎಂಬ ಹೆಸರಿನಲ್ಲಿ ಅವರು ನಕಲಿ ಆಧಾರ್​ ಕಾರ್ಡ್​ ಸಿದ್ಧಪಡಿಸಿಕೊಂಡು ಮೋಸ ಮಾಡಲು ಪ್ರಯತ್ನಿಸಿದ್ದಾರೆ.

ಸಲ್ಮಾನ್​ ಖಾನ್ ಅವರನ್ನು ಕೊಲ್ಲುವುದಾಗಿ ಈಗಾಗಲೇ ಗ್ಯಾಂಗ್​ಸ್ಟರ್​ ಲಾರೆನ್ಸ್​ ಬಿಷ್ಣೋಯ್​, ಗೋಲ್ಡಿ ಬ್ರಾರ್​ ಮುಂತಾದವರು ಬೆದರಿಕೆ ಹಾಕಿದ್ದಾರೆ.

Advertisement
Tags :
LatestNewsNewsKannadaಪನ್ವೇಲ್ಫಾರ್ಮ್‌ಹೌಸ್‌ಬಂಧನಯುವಕಸಲ್ಮಾನ್​ ಖಾನ್​
Advertisement
Next Article