ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಇಬ್ಬರು ಹೆಂಡತಿಯರು, ಒಂಬತ್ತು ಮಕ್ಕಳು, 6 ಪ್ರೇಯಸಿಯರು: ಇಷ್ಟಿದ್ರು ಆತ ಅರೆಸ್ಟ್‌ ಆಗಿದ್ದೇಕೆ

ಯುವಜನರಲ್ಲಿ ಇತ್ತೀಚೆಗೆ ರೀಲ್ಸ್‌ ಮಾಡುವ ಖಯಾಲಿ ಹೆಚ್ಚಿದೆ. ಆದರೆ ರೀಲ್ಸ್‌ ಮಾಡುವವರ ಜೀವನ ರಿಯಲ್‌ ನಲ್ಲಿಯೂ ಅದೇ ರೀತಿ ಇರುವುದಿಲ್ಲ. ಹಲವು ವಂಚಕರು, ದಂಧೆ ಮಾಡುವವರು ಕೂಡ ಇದೀಗ ರೀಲ್ಸ್‌ ಶೋಕಿ ಆರಂಭಿಸಿದ್ದಾರೆ. ಅಂತಹುದೇ ಪ್ರಕರಣವೊಂದನ್ನು ಪೊಲೀಸರು ಬೇಧಿಸಿದ್ದಾರೆ.
06:01 PM Nov 30, 2023 IST | Ashika S

ಲಕ್ನೊ: ಯುವಜನರಲ್ಲಿ ಇತ್ತೀಚೆಗೆ ರೀಲ್ಸ್‌ ಮಾಡುವ ಖಯಾಲಿ ಹೆಚ್ಚಿದೆ. ಆದರೆ ರೀಲ್ಸ್‌ ಮಾಡುವವರ ಜೀವನ ರಿಯಲ್‌ ನಲ್ಲಿಯೂ ಅದೇ ರೀತಿ ಇರುವುದಿಲ್ಲ. ಹಲವು ವಂಚಕರು, ದಂಧೆ ಮಾಡುವವರು ಕೂಡ ಇದೀಗ ರೀಲ್ಸ್‌ ಶೋಕಿ ಆರಂಭಿಸಿದ್ದಾರೆ. ಅಂತಹುದೇ ಪ್ರಕರಣವೊಂದನ್ನು ಪೊಲೀಸರು ಬೇಧಿಸಿದ್ದಾರೆ.

Advertisement

ಈ ದುಬಾರಿ ಜಗತ್ತಿನಲ್ಲಿ ಓರ್ವ ಹೆಂಡತಿಯನ್ನು ಸಾಕುವುದೇ ಕಷ್ಟದ ಕೆಲಸ, ಆದರೆ ಇಲ್ಲೊಬ್ಬ ರೀಲ್ಸ್‌ ವಂಕ ವಂಚಕ ಇಬ್ಬರು ಹೆಂಡತಿಯರನ್ನು ಮೇಂಟೇನ್‌ ಮಾಡುತ್ತಾ ಅವರಿಂದ ಒಂಬತ್ತು ಮಕ್ಕಳನ್ನು ಪಡೆದು, ಅದು ಸಾಲದೆಂಬಂತೆ ಆರು ಗೆಳತಿಯರನ್ನು ಹೊಂದಿ ಜನರನ್ನು ವಂಚಿಸಿ ರೀಲ್ಸ್‌ ಮಾಡುತ್ತಾ ಹಾಯಾಗಿದ್ದ ಇದೀಗ ಆ ವಂಚಕ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಆ ವಂಚಕ ಅಜಿತ್‌ ಮೌರ್ಯ (41). ಆತನನ್ನು ನಕಲಿ ನೋಟು ಚಲಾವಣೆ, ನಕಲಿ ಪೋಂಜಿ ಯೋಜನೆ, ವಿಮಾ ವಂಚನೆಗೆ ಸಂಬಂಧಿಸಿ ಪೊಲೀಸರು ಬಂಧಿಸಿದ್ದಾರೆ. ಮೌರ್ಯ ತನ್ನ ಪತ್ನಿಯೊಬ್ಬಳೊಂದಿಗೆ ಹೊಸ ವರ್ಷಾಚರಣೆಗೆ ವಿದೇಶಕ್ಕೆ ಹೋಗಲು ಪ್ಲ್ಯಾನ್‌ ಮಾಡಿಕೊಂಡಿದ್ದ ವೇಳೆ ಬಂಧಿಸಿದ್ದಾರೆ.

Advertisement

6 ನೇ ತರಗತಿ ವಿದ್ಯಾಭ್ಯಾಸ ಮಾಡಿರುವ ಮೌರ್ಯ ತಾನು ಮಕ್ಕಳು, ಪತ್ನಿಯರು, ಪ್ರೇಯಸಿಯರನ್ನು ಸಾಕುವುದಕ್ಕೋಸ್ಕರ ಇಂತಹ ಕೃತ್ಯ ಮಾಡಿರುವುದಾಗಿ ಪೊಲೀಸರಲ್ಲಿ ಹೇಳಿಕೊಂಡಿದ್ದಾನೆ.

Advertisement
Tags :
LatetsNewsNewsKannadaದಂಧೆಪ್ರಕರಣರೀಲ್ಸ್ವಂಚಕರು
Advertisement
Next Article