ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಕರಾವಳಿಗೆ ಸಿದ್ದು ಸರ್ಕಾರದಿಂದ ಬಂಪರ್​ ಗಿಫ್ಟ್

ಬಜೆಟ್​ನಲ್ಲಿ ಬಂದರು ಮತ್ತು ಒಳನಾಡಿನ ಅಭಿವೃದ್ಧಿಗೆ ಸರ್ಕಾರ ಚಿತ್ತಹರಿಸಿದೆ. ರಾಜ್ಯದ 320 ಕಿ.ಮೀಟರ್ ಉದ್ದದ ಕರಾವಳಿ ತೀರಗಳ ಸಮರ್ಪಕ ಬಳಕೆಗೆ ಒತ್ತು ನೀಡಲು ಮಂದಾಗಿದೆ. ಬಂದರು ಮತ್ತು ರೈಲುಗಳು ವಿಮಾನ ಸಂಪರ್ಕವನ್ನ ಸುಗಮಗೊಳಿಸಲು ಯೋಜನೆ ಹಾಕಿಕೊಂಡಿದೆ. ಹೀಗಾಗಿ ಕೆಲವು ವರ್ಷಗಳಲ್ಲಿ ಅಂದಾಜು 20 ಸಾವಿರ ಕೋಟಿ ಹೂಡಿಕೆ ಮಾಡುವ ಗುರಿಯನ್ನು ಸಿದ್ದರಾಮಯ್ಯ ಸರ್ಕಾರ ಹೊಂದಿದೆ.
12:05 PM Feb 16, 2024 IST | Ashitha S

ಬೆಂಗಳೂರು: ಬಜೆಟ್​ನಲ್ಲಿ ಬಂದರು ಮತ್ತು ಒಳನಾಡಿನ ಅಭಿವೃದ್ಧಿಗೆ ಸರ್ಕಾರ ಚಿತ್ತಹರಿಸಿದೆ. ರಾಜ್ಯದ 320 ಕಿ.ಮೀಟರ್ ಉದ್ದದ ಕರಾವಳಿ ತೀರಗಳ ಸಮರ್ಪಕ ಬಳಕೆಗೆ ಒತ್ತು ನೀಡಲು ಮಂದಾಗಿದೆ. ಬಂದರು ಮತ್ತು ರೈಲುಗಳು ವಿಮಾನ ಸಂಪರ್ಕವನ್ನ ಸುಗಮಗೊಳಿಸಲು ಯೋಜನೆ ಹಾಕಿಕೊಂಡಿದೆ. ಹೀಗಾಗಿ ಕೆಲವು ವರ್ಷಗಳಲ್ಲಿ ಅಂದಾಜು 20 ಸಾವಿರ ಕೋಟಿ ಹೂಡಿಕೆ ಮಾಡುವ ಗುರಿಯನ್ನು ಸಿದ್ದರಾಮಯ್ಯ ಸರ್ಕಾರ ಹೊಂದಿದೆ.

Advertisement

2024-2025ನೇ ಸಾಲಿನ ಬಜೆಟ್​ನಲ್ಲಿ ಸಮುದ್ರ ಸಾರಿಗೆ, ಸರಕು ಸಾಗಣೆ, ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಒತ್ತು ನೀಡಿದೆ. ರಾಜ್ಯದ ಜಲ ಸಾರಿಗೆ ಮೂಲಸೌಕರ್ಯಗಳ ಅಭಿವೃದ್ದಿಗೆ ಹೂಡಿಕೆ ಮಾಡಲು ಮುಂದಾಗಿದೆ. ಖಾಸಗಿ ಹೂಡಿಕೆಗಳನ್ನ ಆಕರ್ಷಿಸಲು ಕರ್ನಾಟಕ ಜಲಸಾರಿಗೆ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ.

ಇನ್ನು ಸಾಗರ ಮಾಲಾ ಯೋಜನೆಯಡಿ ಕಡಲ ತೀರದ ವ್ಯಾಪಾರಕ್ಕೆ ಆದ್ಯತೆ ನೀಡಿದೆ. ಅಂದಾಜು 1,017 ಕೋಟಿ ವೆಚ್ಚದಲ್ಲಿ 26 ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ತಿಳಿಸಿದೆ. ಇನ್ನೂ 1,145 ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳ ಯೋಜನಾ ವರದಿ ತಯಾರಿಸಿದೆ. 12 ಕಾಮಗಾರಿಗಳ ವರದಿಗಳನ್ನ ಕೇಂದ್ರದ ಅನುಮೋದನೆಗೆ ಸಲ್ಲಿಸಲಾಗಿದೆ.

Advertisement

ಉತ್ತರ ಕನ್ನಡ ಜಿಲ್ಲೆಯ ಕೇಣಿಯಲ್ಲಿ 30 MTPA ಸರ್ವಋುತು ಬಂದರು ನಿರ್ಮಾಣ ಮಾಡಲು ಸರ್ಕಾರ ಯೋಜನೆ ಹಾಕಿಕೊಂಡಿದೆ. 4,200 ಕೋಟಿ ವೆಚ್ಚದಲ್ಲಿ ಹೊಸ ಆಳಸಮುದ್ರ ಸರ್ವಋತು ಬಂದರು ನಿರ್ಮಿಸುವುದಾಗಿ ಹೇಳಿದೆ. ಇದಲ್ಲದೆ, ಉತ್ತರ ಕನ್ನಡ ಜಿಲ್ಲೆಯ ಪಾವಿನಕುರ್ವೆಯಲ್ಲಿ ಎರಡನೇ ಬೃಹತ್ ಬಂದರು ನಿರ್ಮಾಣ. ಪಿಪಿಪಿ ಮಾದರಿಯಲ್ಲಿ ಅಂದಾಜು 3,048 ಕೋಟಿ ವೆಚ್ಚದಲ್ಲಿ ಬಂದರು ಅಭಿವೃದ್ಧಿ ಮಾಡಲು ಚಿಂತಿಸಿದೆ.

ಕಾರವಾರ, ಮಲ್ಪೆ, ಹಳೇ ಮಂಗಳೂರು ಬಂದರುಗಳಲ್ಲಿ 4 ಬರ್ತ್ ಅಭಿವೃದ್ಧಿ ಮಾಡುವುದಾಗಿ ತಿಳಿಸಿದೆ. ಕಾರವಾರ, ಹಳೇ ಮಂಗಳೂರು ಸೇರಿ 11 ಕಿರು ಬಂದರುಗಳಲ್ಲಿ ಹೂಳೆತ್ತುವ ಕಾರ್ಯ ಮಾಡಲಿದೆ. ಉತ್ತರಕನ್ನಡದ ಮಂಕಿಯಲ್ಲಿ ವಿವಿದೋದ್ದೇಶ ಬಂದರು ಅಭಿವೃದ್ಧಿ ಬಗ್ಗೆ ಚಿಂತಿಸಿದೆ. ಕಾರವಾರ ಬಂದರಿನಲ್ಲಿ ಬೆಂಕಿ ನಂದಿಸುವ ಉಪಕರಣಗಳ ಅಳವಡಿಕೆಗೆ ಕಾಮಗಾರಿ ಮಾಡುವುದಾಗಿ ಸರ್ಕಾರ ತಿಳಿಸಿದೆ.

Advertisement
Tags :
BreakingNewsGOVERNMENTindiaKARNATAKALatestNewsNewsKannadaಮಂಗಳೂರುಸಿದ್ದರಾಮಯ್ಯ
Advertisement
Next Article