ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮರುಬಿಡುಗಡೆಗೆ ತಯಾರಾಗಿದೆ ಉಪೇಂದ್ರ ಅಭಿನಯಿಸಿ, ನಿರ್ದೇಶಿಸಿದ 'ಎ' ಸಿನೆಮಾ

ಚುನಾವಣೆ ಹಾಗೂ ಐಪಿಎಲ್ ಕಾರಣದಿಂದ ಹೊಸ ಸಿನಿಮಾಗಳ ಬಿಡುಗಡೆ ಇಲ್ಲವಾದ ಕಾರಣ ಮತ್ತೆ ಹಳೆ ಸಿನಿಮಾ ಬಿಡುಗಡೆ ಮಾಡಲು ನಿರ್ಮಾಪಕರುಗಳು ಮುಂದಾಗಿದ್ದಾರೆ.
12:59 PM May 11, 2024 IST | Ashika S

ಬೆಂಗಳೂರು: ಚುನಾವಣೆ ಹಾಗೂ ಐಪಿಎಲ್ ಕಾರಣದಿಂದ ಹೊಸ ಸಿನಿಮಾಗಳ ಬಿಡುಗಡೆ ಇಲ್ಲವಾದ ಕಾರಣ ಮತ್ತೆ ಹಳೆ ಸಿನಿಮಾ ಬಿಡುಗಡೆ ಮಾಡಲು ನಿರ್ಮಾಪಕರುಗಳು ಮುಂದಾಗಿದ್ದಾರೆ.

Advertisement

ಉಪೇಂದ್ರ ನಟಿಸಿ, ನಿರ್ದೇಶನ ಮಾಡಿದ್ದ ಕಲ್ಟ್ ಕ್ಲಾಸಿಕ್ ಸಿನಿಮಾ ಒಂದನ್ನು ಮರು ಬಿಡುಗಡೆ ಮಾಡಲಾಗಿದೆ. 1998 ರಲ್ಲಿ ಬಿಡುಗಡೆ ಆದ  ಉಪೇಂದ್ರ ಮೊದಲ ಬಾರಿಗೆ ನಾಯಕ ನಟನಾಗಿ ನಟಿಸಿ, ನಿರ್ದೇಶನವನ್ನೂ ಮಾಡಿದ್ದ ‘ಎ’ ಸಿನಿಮಾವನ್ನು ಇದೀಗ ಮರು ಬಿಡುಗಡೆ ಮಾಡಲಾಗುತ್ತಿದೆ.

ಸಾಂಪ್ರದಾಯಿಕ ಕತೆ ಹೇಳುವ ಪದ್ಧತಿಯನ್ನು ನುಚ್ಚು ನೂರು ಮಾಡಿದ್ದ ಉಪೇಂದ್ರ ‘ಎ’ ಸಿನಿಮಾ ಮೂಲಕ ಭಿನ್ನ ವ್ಯಕ್ತಿಯ ಕತೆಯನ್ನು ಅಷ್ಟೆ ಭಿನ್ನವಾಗಿ ಹೇಳಿದ್ದರು. ಸಿನಿಮಾದ ನಾಯಕ, ನಾಯಕಿಗೆ ಆ ಹಿಂದೆ ಇದ್ದ ಎಲ್ಲ ಗಡಿಗಳನ್ನು ಒಡೆದು ನಾಯಕನನ್ನು ಬಹಳ ಭಿನ್ನವಾಗಿ ತೋರಿಸಿದ್ದರು.

Advertisement

‘ಎ’ ಸಿನಿಮಾವನ್ನು ಉಪ್ಪಿ ಎಂಟರ್ಟೈನ್​ಮೆಂಟ್ ವತಿಯಿಂದ ನಿರ್ಮಾಣ ಮಾಡಲಾಗಿತ್ತು. ಸಿನಿಮಾವನ್ನು ಯಶ್ ರಾಜ್ ಎಂಬುವರು ವಿತರಣೆ ಮಾಡಿದ್ದರು. ಕೇವಲ 1 ಕೋಟಿ ಬಜೆಟ್​ನಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ ಸುಮಾರು 20 ಕೋಟಿ ಗಳಿಕೆ ಮಾಡಿತ್ತು.

ನಿನ್ನೆ ದಿವಂಗತ ಪುನೀತ್ ರಾಜ್​ಕುಮಾರ್ ಹಾಗೂ ತ್ರಿಷಾ ನಟಿಸಿದ್ದ ‘ಪವರ್’ ಹಾಗೂ ಪುನೀತ್ ರಾಜ್​ಕುಮಾರ್ ಹಾಗೂ ನಟಿ ರಶ್ಮಿಕಾ ಮಂದಣ್ಣ ನಟಿಸಿದ್ದ ‘ಅಂಜನಿಪುತ್ರ’ ಸಿನಿಮಾಗಳು ನಿನ್ನೆ ಬಿಡುಗಡೆ ಆಗಿದ್ದವು.

Advertisement
Tags :
'A' movieLatetsNewsNewsKarnatakaSANDALWOODUPPENDRA
Advertisement
Next Article