For the best experience, open
https://m.newskannada.com
on your mobile browser.
Advertisement

ಚಿನ್ನದ ಕೇಕ್‌ ಕಟ್‌ ಮಾಡಿ ವಿಶ್ವ ದಾಖಲೆ ಸೃಷ್ಟಿಸಿದ ಊರ್ವಶಿ ರೌಟೇಲಾ

ಬಾಲಿವುಡ್ ನಟಿ ಮತ್ತು ರೂಪದರ್ಶಿ ಊರ್ವಶಿ ರೌಟೇಲಾ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಊರ್ವಶಿ ಇಂದು ತಮ್ಮ 30ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ನಿನ್ನೆ ತಡರಾತ್ರಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಅವರು 24 ಕ್ಯಾರಟ್​ ಚಿನ್ನದಿಂದ ಅಲಂಕರಿಸಿದ ಗೋಲ್ಡನ್ ಕೇಕ್ ಅನ್ನು ಕಟ್ ಮಾಡಿದ್ದಾರೆ. ಇದರ ಹಲವಾರು ಫೋಟೋಗಳನ್ನು ನಟಿ ಶೇರ್​ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಗಾಯಕ-ರ್ಯಾಪರ್ ಯೋ ಯೋ ಹನಿ ಸಿಂಗ್ ಕೂಡ ಇದ್ದರು.
04:16 PM Feb 25, 2024 IST | Ashitha S
ಚಿನ್ನದ ಕೇಕ್‌ ಕಟ್‌ ಮಾಡಿ ವಿಶ್ವ ದಾಖಲೆ ಸೃಷ್ಟಿಸಿದ ಊರ್ವಶಿ ರೌಟೇಲಾ

ಮುಂಬೈ: ಬಾಲಿವುಡ್ ನಟಿ ಮತ್ತು ರೂಪದರ್ಶಿ ಊರ್ವಶಿ ರೌಟೇಲಾ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಊರ್ವಶಿ ಇಂದು ತಮ್ಮ 30ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ನಿನ್ನೆ ತಡರಾತ್ರಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಅವರು 24 ಕ್ಯಾರಟ್​ ಚಿನ್ನದಿಂದ ಅಲಂಕರಿಸಿದ ಗೋಲ್ಡನ್ ಕೇಕ್ ಅನ್ನು ಕಟ್ ಮಾಡಿದ್ದಾರೆ. ಇದರ ಹಲವಾರು ಫೋಟೋಗಳನ್ನು ನಟಿ ಶೇರ್​ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಗಾಯಕ-ರ್ಯಾಪರ್ ಯೋ ಯೋ ಹನಿ ಸಿಂಗ್ ಕೂಡ ಇದ್ದರು.

Advertisement

ಈ 24 ಕ್ಯಾರಟ್​ ಚಿನ್ನದ ಲೇಪಿತ ಕೇಕ್ ಅನ್ನು 'ಲವ್ ಡೋಸ್ 2' ಸೆಟ್‌ನಲ್ಲಿ ಕತ್ತರಿಸಿದ್ದೇನೆ ಎಂದು ನಟಿ ಶೀರ್ಷಿಕೆಯಲ್ಲಿ ಹೇಳಿದ್ದಾರೆ. ವಾಸ್ತವವಾಗಿ, ಹನಿ ಸಿಂಗ್ ಅವರು ನಟಿ ಊರ್ವಶಿ ಅವರ ಮುಂದಿನ ಸಂಗೀತ ವಿಡಿಯೋ 'ಲವ್ ಡೋಸ್ 2' ನೊಂದಿಗೆ ಬರುತ್ತಿದ್ದಾರೆ. ಈ ಹಾಡಿನ ಚಿತ್ರೀಕರಣದ ಸೆಟ್‌ನಲ್ಲಿಯೇ ಊರ್ವಶಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅಂದಹಾಗೆ ಈ ಕೇಕ್​ ಕೂಡ ಹನಿ ಸಿಂಗ್​ ಅವರೇ ತರಿಸಿದ್ದು ಎನ್ನಲಾಗಿದೆ.

ಅಷ್ಟಕ್ಕೂ ಈ ಕೇಕ್​ ಬೆಲೆ ಎಷ್ಟು ಗೊತ್ತಾ? ಬರೋಬ್ಬರಿ ಮೂರು ಕೋಟಿ ರೂಪಾಯಿಯಂತೆ. ಹುಟ್ಟುಹಬ್ಬದ ಕೇಕ್​ ಕಟ್​ ಮಾಡುವ ಸಂದರ್ಭದಲ್ಲಿ ನಟಿ, ಕೆಂಪು ಬಣ್ಣದ ಥಾಯ್ ಸ್ಲಿಟ್ ಡ್ರೆಸ್ ಧರಿಸಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಊರ್ವಶಿ ಕೈಯಲ್ಲಿ ಬಳೆ, ಕುತ್ತಿಗೆಗೆ ಹಾರ ಮತ್ತು ತೆರೆದ ಕೂದಲಿನೊಂದಿಗೆ ತುಂಬಾ ಸುಂದರವಾಗಿ ಪೋಸ್​ ಕೊಟ್ಟಿದ್ದು, ಅಭಿಮಾನಿಗಳು ಸೂಪರ್​ ಎಂದು ಕಮೆಂಟ್​ ಹಾಕುತ್ತಿದ್ದಾರೆ. ಕುತೂಹಲದ ವಿಷಯ ಎಂದರೆ ಕಳೆದ ವರ್ಷ ನಟಿ ಹುಟ್ಟುಹಬ್ಬದಂದು ಡೈಮಂಡ್ ಕೇಕ್ ಅನ್ನು ಕಟ್ ಮಾಡಿದ್ದರು. ಅದನ್ನು 24-ಕ್ಯಾರಟ್​ ಚಿನ್ನದ ಕಪ್‌ಕೇಕ್‌ಗಳಿಂದ ಅಲಂಕರಿಸಲಾಗಿತ್ತು

Advertisement

Advertisement
Tags :
Advertisement