ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

೧೨ರ ಬಾಲಕ ಪ್ರಥಮ ದರ್ಜೆ ಕ್ರಿಕೆಟ್​ ಗೆ ಪಾದಾರ್ಪಣೆ; ಸಚಿನ್‌ ರನ್ನು ಸರಿಗಟ್ಟಿದ ಸೂರ್ಯವಂಶಿ

ಬಿಹಾರ ತಂಡದಿಂದ ೧೨ ವರ್ಷದ ವೈಭವ್‌ ಸೂರ್ಯವಂಶಿ ಪ್ರಥಮ ದರ್ಜೆ ಕ್ರಿಕೆಟ್‌ ಗೆ ಪಾದಾರ್ಪಣೆ ಮಾಡುತ್ತಿದ್ದು, ಹೀಗೆ ಮಾಡಿದ ೫ನೇ ಆಟಗಾರ ಎನಿಸಿಕೊಂಡಿದ್ದಾರೆ.
07:03 PM Jan 05, 2024 IST | Maithri S

ಬಿಹಾರ: ಜ.೫ರಿಂದ ಆರಂಭವಾಗಿರುವ ೨೦೨೩-೨೪ರ ರಣಜಿ ಟ್ರೋಫಿಯಲ್ಲಿ ೩೮ ತಂಡಗಳು ದೇಶೀಯ ಕ್ರಿಕೆಟ್​ ಟೂರ್ನಿಯಲ್ಲಿ ಭಾಗವಹಿಸುತ್ತಿವೆ. ಮುಂಬೈ ಹಾಗೂ ಬಿಹಾರ ತಂಡಗಳ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ.

Advertisement

ಬಿಹಾರ ತಂಡದಿಂದ ೧೨ ವರ್ಷದ ವೈಭವ್‌ ಸೂರ್ಯವಂಶಿ ಪ್ರಥಮ ದರ್ಜೆ ಕ್ರಿಕೆಟ್‌ ಗೆ ಪಾದಾರ್ಪಣೆ ಮಾಡುತ್ತಿದ್ದು, ಹೀಗೆ ಮಾಡಿದ ೫ನೇ ಆಟಗಾರ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ೧೯೪೨-೪೩ರಲ್ಲಿ ರಜಪೂತನ ತಂಡದ ಪರವಾಗಿ ಆಡಿದ್ದ ಅಲಿಮುದ್ದೀನ್ ಹೆಸರು ಮೊದಲಲ್ಲಿದೆ. ಸಚಿನ್‌ ತೆಂಡುಲ್ಕರ್‌ ತಮ್ಮ ೧೫ನೇ ವಯಸ್ಸಿನಲ್ಲಿ ಪ್ರಥಮದರ್ಜೆ ಕ್ರಿಕೆಟ್‌ ಗೆ ಪಾದಾರ್ಪಣೆ ಮಾಡಿದ್ದರು.

ಭಾರತ ಅಂಡರ್​-19 ಬಿ ತಂಡದ ಭಾಗವಾಗಿರುವ ಸೂರ್ಯವಂಶಿ, ಇಂಗ್ಲೆಂಡ್ ಮತು ಬಾಂಗ್ಲಾದೇಶದೊಂದಿಗೆ ಐದು ಪಂದ್ಯಗಳಲ್ಲಿ ಆಡಿದ್ದು, ೨೦೨೩ರ ವಿನೂ ಮಂಕಡ್ ಟ್ರೋಫಿಯಲ್ಲೂ ಕಾಣಿಸಿಕೊಂಡಿದ್ದರು. ವೈಭವ್ ಎಡಗೈ ಬ್ಯಾಟ್ಸ್‌ಮನ್ ಆಗಿದ್ದಾರೆ.

Advertisement

ಈ ಕುರಿತು ಮಾತನಾಡಿದ ವೈಭವ್‌ ನ ತಂದೆ ಸಂಜೀವ್‌, ನನ್ನ ಮಗ ಕಳೆದ ವರ್ಷ ಆರು ಡೂರ್ನಿಗಳಲ್ಲಿ ಭಾಗವಹಿಸಿದ್ದು, ಕೆಲ ದಿಗ್ಗಜ ಆಟಗಾರರ ವಿರುದ್ಧ ಆಡಿರುವುದು ಹೆಮ್ಮೆಯ ವಿಚಾರ. ಈಗ ನಡೆಯುತ್ತಿರುವ ರಣಜಿ ಟ್ರೋಫಿಯಲ್ಲಿ ಹೆಚ್ಚು ರನ್‌ ಗಳಿಸುತ್ತಾನೆ ಮತ್ತು ಮುಂದೆ ಭಾರತ ತಂಡಕ್ಕೆ ಆಡಲಿದ್ದಾನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement
Tags :
BIHARcricketindiaLatestNewsNewsKannada
Advertisement
Next Article