ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಪ್ರಿಯಾಂಕ್ ಖರ್ಗೆ ಅವರ ಆಸ್ತಿ ವಿಚಾರ ಕೆದಕಿದ ವಸಂತ್ ಬಂಗೇರ  

ಸಚಿವ ಪ್ರಿಯಾಂಕ್ ಖರ್ಗೆ  ಅವರ ಆಸ್ತಿ ವಿಚಾರವನ್ನು ಕಿಯೋನಿಕ್ಸ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ವಸಂತ್ ಬಂಗೇರ  ಅವರು ಕೆದಕಿದ್ದಾರೆ.
08:10 PM Nov 09, 2023 IST | Ashika S

ಬೆಂಗಳೂರು:  ಸಚಿವ ಪ್ರಿಯಾಂಕ್ ಖರ್ಗೆ  ಅವರ ಆಸ್ತಿ ವಿಚಾರವನ್ನು ಕಿಯೋನಿಕ್ಸ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ವಸಂತ್ ಬಂಗೇರ  ಅವರು ಕೆದಕಿದ್ದಾರೆ.

Advertisement

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ‘ ಸಚಿವರಿಗೆ ಸದಾಶಿವನಗರದಲ್ಲಿ 7 ರಿಂದ 8 ಬಂಗಲೆ, ಜಮೀನು, ಕಾರು ಎಲ್ಲಿಂದ ಬರುತ್ತೆ. 2013 ರಿಂದ 2018ರವರೆಗೆ ದಾಖಲಾತಿ ತೆಗೆದರೆ ಎಲ್ಲಾ ಬಯಲಿಗೆ ಬರುತ್ತೆ ಎಂದು ವಸಂತ್ ಬಂಗೇರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಕಿಯೋನಿಕ್ಸ್  ಎಂಡಿ ಸಂಗಪ್ಪ ವಿರುದ್ದವೂ ಆಕ್ರೋಶ ಹೊರಹಾಕಿದ್ದು, ‘ಅಂಗವಿಕಲರ ಹಣವನ್ನ ಇಟ್ಟುಕೊಂಡು ಆಟ ಆಡಿಸುತ್ತಿದ್ದ. ಇದನ್ನು ಬಯಲಿಗೆಳೆದ ಮೇಲೆ ಸರ್ಕಾರವೇ ಅಮಾನತು ಮಾಡಿತ್ತು. ಇಂಥವನನ್ನು ಕಿಯೋನಿಕ್ಸ್ ಎಂಡಿ ಹುದ್ದೆಯಲ್ಲಿ ಕೂರಿಸಿದ್ದೀರೆಂದು ಕಿಡಿ ಕಾರಿದ್ದಾರೆ.

Advertisement

ಕಿಯೋನಿಕ್ಸ್ ಸಂಬಂಧ ಸಚಿವ ಪ್ರಿಯಾಂಕ್ ಸುದ್ದಿಗೋಷ್ಠಿ ನಡೆಸಿದ್ದಾರೆ. ನಾವು ಕಿಯೋನಿಕ್ಸ್ ಸಂಸ್ಥೆಯಲ್ಲಿ ಅನ್ನ ತಿಂದಿದ್ದೇವೆ. ನೀವು ಬಂದಾಗ ಅವರದ್ದು ಹುಡುಕುವುದು, ಅವರು ಬಂದಾಗ ನಿಮ್ಮದು ಹುಡುಕುವುದು. ಉತ್ತರ ಕರ್ನಾಟಕದ ‌ತಾಂಡ ಅಭಿವೃದ್ಧಿ ನಿಗಮದಿಂದ ಶುದ್ಧ ನೀರು ಕುಡಿಯುವ ಮಿಷನ್​ನ್ನು 2019 ರಲ್ಲಿ ಹಾಕಿ, 5 ಕೋಟಿ 50 ಲಕ್ಷ ಹಣವನ್ನ ಬಿಡುಗಡೆ ಮಾಡಿದ್ದಾರೆ.

ಇದರಲ್ಲಿ ಬರೋಬ್ಬರಿ ಒಂದು ಲಕ್ಷ ಹಣ ವ್ಯತ್ಯಾಸ ಇದೆ. ನಮ್ಮನ್ನ ಕಳ್ಳರಂತೆ ಬಿಂಬಿಸಲಾಗುತ್ತಿದೆ. ಪ್ರತಿ ವರ್ಷ ಅಡಿಟ್ ಆಗುತ್ತೆ. ಯಾವುದೇ ಇಲಾಖೆಯಲ್ಲಿ ಹೋದರೂ, ನ್ಯೂನತೆಗಳನ್ನ ಬರೆದು ಬರುತ್ತಾರೆ. ಯಾರೋ ನಾಲ್ಕು ಜನ ಕಳ್ಳರು ಮಾಡಿರಬಹುದು, ಅವರನ್ನ ಬ್ಲಾಕ್ ಲಿಸ್ಟ್​ಗೆ ಹಾಕಿ, ಅವರ ಮೇಲೆ ನೀವು ಕ್ರಮ‌ಕೈಗೊಳ್ಳಿ ಎಂದರು.

Advertisement
Tags :
LatetsNewsNewsKannadaಆಸ್ತಿ ವಿಚಾರಕಿಯೋನಿಕ್ಸ್ಗುತ್ತಿಗೆದಾರಪ್ರಿಯಾಂಕ್ ಖರ್ಗೆವಸಂತ್ ಬಂಗೇರ
Advertisement
Next Article