ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಸುರಂಗ ಕುಸಿತ ಸ್ಥಳಕ್ಕೆ ದೇವರ ಪಲ್ಲಕ್ಕಿ ಹೊತ್ತು ತಂದ ಗ್ರಾಮಸ್ಥರು

ಉತ್ತರಕಾಶಿ: ಉತ್ತರಾಖಂಡದ ಉತ್ತರಕಾಶಿಯಲ್ಲಿ ನಿರ್ಮಾಣ ಹಂತದಲ್ಲಿರುವ ಸಿಲ್ಕ್ಯಾರಾ-ಬಾರ್ಕೋಟ್ ಸುರಂಗದೊಳಗೆ ಸಿಲುಕಿರುವ 41 ಕಟ್ಟಡ ಕಾರ್ಮಿಕರನ್ನು ರಕ್ಷಿಸುವ ಪ್ರಯತ್ನಗಳು ಭರದಿಂದ ನಡೆಯುತ್ತಿವೆ. ಈ ರಕ್ಷಣಾ ಕಾರ್ಯಕ್ಕಾಗಿ ಅಮೆರಿಕ ನಿರ್ಮಿತ ಯಂತ್ರಗಳನ್ನು ಬಳಸಲಾಗಿದೆ. ಈ ಹೊತ್ತಿನಲ್ಲೇ ಸಮೀಪದ ಗ್ರಾಮಗಳ ಸ್ಥಳೀಯರು ಸ್ಥಳೀಯ ದೇವತೆಯ ‘ಡೋಲಿ’ (ಪಲ್ಲಕ್ಕಿ) ಅನ್ನು ಹೊತ್ತುಕೊಂಡು ಬಂದು ಸಂತ್ರಸ್ತರ ಸುರಕ್ಷತೆಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಸ್ಥಳೀಯರ ಗುಂಪು ‘ಡೋಲಿ’ಯನ್ನು ಹೊತ್ತುಕೊಂಡು ‘ಧೋಲ್’ ಮತ್ತು ಘಂಟೆ ಬಾರಿಸುತ್ತಾ ರಕ್ಷಣಾ ಸ್ಥಳದ ಕಡೆಗೆ ನಡೆದಿದ್ದಾರೆ. ರಕ್ಷಣಾ ಕಾರ್ಯ ನಡೆಯುವ ಸ್ಥಳದಲ್ಲಿ ಸ್ಥಳೀಯ ದೇವತೆ ಬಾಬಾ ಬೌಖ್‌ನಾಗ್‌ನ ದೇವಾಲಯವನ್ನು ಅವರು ನಿರ್ಮಿಸುತ್ತಿದ್ದಾರೆ.
10:33 PM Nov 23, 2023 IST | Umesha HS

Tags :
labouruttarakandಉತ್ತರಾಖಂಡಕಾರ್ಮಿಕರುಸರ್ಕಾರಸುರಂಗ
Advertisement
Next Article