ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಪುಟ್ಟ ಆರ್‌ಸಿಬಿ ಅಭಿಮಾನಿಗೆ ಆಟೋಗ್ರಾಫ್ ನೀಡಿದ ವಿರಾಟ್ ಕೊಹ್ಲಿ ​

ಭಾರತ ಮತ್ತು ಸೌತ್​ ಆಫ್ರಿಕಾ ಮಧ್ಯೆ ಸೆಂಚೂರಿಯನ್​ನಲ್ಲಿ ಮೊದಲ ಟೆಸ್ಟ್​ ಪಂದ್ಯ ನಡೆಯುತ್ತಿದೆ. 2ನೇ ದಿನದಾಟದ ಆರಂಭಕ್ಕೂ ಮೊದಲು ಆರ್​ಸಿಬಿಯ ಪುಟ್ಟ ಅಭಿಮಾನಿಗೆ ವಿರಾಟ್​ ಕೊಹ್ಲಿ ಅವರು ಆಟೋಗ್ರಾಫ್​ ನೀಡಿರುವುದು ಕಂಡು ಬಂದಿದೆ. ಈ ದೃಶ್ಯವನ್ನು ಆರ್‌ ಸಿ ಬಿ ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ.
03:13 PM Dec 28, 2023 IST | Ashitha S

ಮುಂಬೈ: ಭಾರತ ಮತ್ತು ಸೌತ್​ ಆಫ್ರಿಕಾ ಮಧ್ಯೆ ಸೆಂಚೂರಿಯನ್​ನಲ್ಲಿ ಮೊದಲ ಟೆಸ್ಟ್​ ಪಂದ್ಯ ನಡೆಯುತ್ತಿದೆ. 2ನೇ ದಿನದಾಟದ ಆರಂಭಕ್ಕೂ ಮೊದಲು ಆರ್​ಸಿಬಿಯ ಪುಟ್ಟ ಅಭಿಮಾನಿಗೆ ವಿರಾಟ್​ ಕೊಹ್ಲಿ ಅವರು ಆಟೋಗ್ರಾಫ್​ ನೀಡಿರುವುದು ಕಂಡು ಬಂದಿದೆ. ಈ ದೃಶ್ಯವನ್ನು ಆರ್‌ ಸಿ ಬಿ ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ.

Advertisement

2ನೇ ದಿನದ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನಾ ಮೈದಾನದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಜೆರ್ಸಿ ತೆಗೆದುಕೊಂಡು ಆಟೋಗ್ರಾಫ್​ಗಾಗಿ ಯಂಗ್​ ಫ್ಯಾನ್ ಕಾಯುತ್ತಿದ್ದನು. ಇದೇ ವೇಳೆ ವಿರಾಟ್​ ಕೊಹ್ಲಿಯವರು ವಾರ್ಮ್​​ಗೆಂದು ಮೈದಾನಕ್ಕೆ ಇಳಿದಿದ್ದರು. ಯುವ ಅಭಿಮಾನಿಯನ್ನು ಮಾತನಾಡಿಸಿದ ವಿರಾಟ್ ಕೊಹ್ಲಿ ಆರ್​​ಸಿಬಿ ಜೆರ್ಸಿಯ ಮೇಲೆ ಆಟೋಗ್ರಾಫ್​ ಹಾಕಿದ್ದಾರೆ.

ಇದಾದ ಮೇಲೆ ಫೋಟೋಬೇಕು ಎಂದು ಬಾಲಕ ಕೇಳಿದ್ದರಿಂದ ವಿರಾಟ್​ ಕೊಹ್ಲಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇಷ್ಟೇ ಅಲ್ಲದೇ, ಸ್ಟೇಡಿಯಂನಲ್ಲಿ ಕೆಲವರು ಆರ್​​ಸಿಬಿ ಜೆರ್ಸಿಯನ್ನು ಧರಿಸಿಕೊಂಡು ಬಂದಿರುವುದು ಕಂಡು ಬಂದಿದ್ದು ಕುತೂಹಲಕ್ಕೆ ಕಾರಣವಾಯಿತು.

Advertisement

Advertisement
Tags :
GOVERNMENTindiaLatestNewsNewsKannadaಆಟೋಗ್ರಾಫ್ಆರ್‌ ಸಿ ಬಿನವದೆಹಲಿಬೆಂಗಳೂರುವಿರಾಟ್ ಕೊಹ್ಲಿ
Advertisement
Next Article