ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಐಎಎಸ್, ಐಪಿಎಸ್ ಅಧಿಕಾರಿಗಳಿಂದ ಯಕ್ಷಗಾನ ವೇಷಧರಿಸಿ ಮತದಾನ ಜಾಗೃತಿ

ಉಡುಪಿ ಜಿಲ್ಲಾಡಳಿತ ವ್ಯಾಪಕವಾಗಿ ಮುಂಬರುವ ಲೋಕಸಭೆ ಚುನಾವಣೆಗಾಗಿ ಮತದಾನ ಜಾಗೃತಿಯಲ್ಲಿ ತೊಡಗಿದೆ. ಮತಜಾಗೃತಿಗಾಗಿ ಸ್ವೀಪ್ ಸಮಿತಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ರಾಜ್ಯದಲ್ಲೇ ವಿಶೇಷ ಎಂಬಂತೆ ಜಿಲ್ಲೆಯ ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳು ಯಕ್ಷಗಾನ ವೇಷಧರಿಸಿ ಮತದಾನ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಿಸಿ ಗಮನ ಸೆಳೆದಿದ್ದಾರೆ.
05:26 PM Apr 13, 2024 IST | Nisarga K
ಐಎಎಸ್, ಐಪಿಎಸ್ ಅಧಿಕಾರಿಗಳಿಂದ ಯಕ್ಷಗಾನ ವೇಷಧರಿಸಿ ಮತದಾನ ಜಾಗೃತಿ

ಉಡುಪಿ: ಉಡುಪಿ ಜಿಲ್ಲಾಡಳಿತ ವ್ಯಾಪಕವಾಗಿ ಮುಂಬರುವ ಲೋಕಸಭೆ ಚುನಾವಣೆಗಾಗಿ ಮತದಾನ ಜಾಗೃತಿಯಲ್ಲಿ ತೊಡಗಿದೆ. ಮತಜಾಗೃತಿಗಾಗಿ ಸ್ವೀಪ್ ಸಮಿತಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ರಾಜ್ಯದಲ್ಲೇ ವಿಶೇಷ ಎಂಬಂತೆ ಜಿಲ್ಲೆಯ ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳು ಯಕ್ಷಗಾನ ವೇಷಧರಿಸಿ ಮತದಾನ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಿಸಿ ಗಮನ ಸೆಳೆದಿದ್ದಾರೆ.

Advertisement

ಕರಾವಳಿಯ ಪ್ರಸಿದ್ದ ಜಾನಪದ ಕಲೆ ಯಕ್ಷಗಾನ ಎಲ್ಲರಿಗೂ ಅಚ್ಚುಮೆಚ್ಚು. ಈ ಕಲೆಯ ಮೂಲಕ ಈಗಾಗಲೇ ಮತದಾನದ ಜಾಗೃತಿ ಬಗ್ಗೆ ಹಲವು ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಭಾರಿ ಸ್ವತಃ ಅಧಿಕಾರಿಗಳೇ ಈ ರೀತಿ ಯಕ್ಷಗಾನ ಕಲೆಯ ವೇಷ ಧರಿಸಿ ಮತದಾನ ಜಾಗೃತಿ ಮೂಡಿಸುತ್ತಿದ್ದಾರೆ. ಉಡುಪಿ ಜಿ. ಪಂ. ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್‌, ಅಪರ ಜಿಲ್ಲಾಧಿಕಾರಿ ಮಮತಾ ದೇವಿ, ಕುಂದಾಪುರ ಉಪ ವಿಭಾಗ ಸಹಾಯಕ ಆಯುಕ್ತರಾದ ರಶ್ಮಿ, ಕರಾವಳಿ ಕಾವಲು ಪಡೆ ಪೊಲಿಸ್ ಅಧೀಕ್ಷಕ ಮಿಥುನ್ ಅವರು ಬಡಗುತಿಟ್ಟು ಯಕ್ಷಗಾನ ಶೈಲಿ ವೇಷಭೂಷಣ ಧರಿಸಿ ಜಿಲ್ಲೆಯ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಶೇಕಡಾ 100 ಮತದಾನಕ್ಕೆ ಮತದಾನದ ಮಹತ್ವವನ್ನು ಸಾರಿ ಎಲ್ಲರೂ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಂಡು ಮತದಾನ ಮಾಡುವಂತೆ ಕರೆ ನೀಡಿದ್ದಾರೆ.

Advertisement

Advertisement
Tags :
awarenessIASIPSLatestNewsNewsKarnatakaOFFICERSUDUPIvoting
Advertisement
Next Article