ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮಂಗಳೂರಿನ ಸಹ್ಯಾದ್ರಿ ಕಾಲೇಜ್ ನಲ್ಲಿ ವಾಕ್-ಇನ್-ಇಂಟರ್ವ್ಯೂ

ಬೆಂಗಳೂರಿನ ತಾಂತ್ರಿಕ ಶಿಕ್ಷಣ, ಕರ್ನಾಟಕ ಸರ್ಕಾರ ಮತ್ತು ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಮಂಗಳೂರು ಜಂಟಿಯಾಗಿ ಮಂಗಳೂರಿನ ಸಹ್ಯಾದ್ರಿ ಕ್ಯಾಂಪಸ್ನಲ್ಲಿ ಡಿಸೆಂಬರ್ 21 ರಂದು ಪದವೀಧರರು, ಎಂಜಿನಿಯರುಗಳು ಮತ್ತು ಡಿಪ್ಲೊಮಾ ಹೊಂದಿರುವವರಿಗೆ ಕೇಂದ್ರೀಕೃತ ವಾಕ್-ಇನ್ ಸಂದರ್ಶನವನ್ನು ಆಯೋಜಿಸಲಾಗಿದೆ.
02:35 PM Dec 14, 2023 IST | Ramya Bolantoor

ಮಂಗಳೂರು: ಬೆಂಗಳೂರಿನ ತಾಂತ್ರಿಕ ಶಿಕ್ಷಣ, ಕರ್ನಾಟಕ ಸರ್ಕಾರ ಮತ್ತು ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಮಂಗಳೂರು ಜಂಟಿಯಾಗಿ ಮಂಗಳೂರಿನ ಸಹ್ಯಾದ್ರಿ ಕ್ಯಾಂಪಸ್ನಲ್ಲಿ ಡಿಸೆಂಬರ್ 21 ರಂದು ಪದವೀಧರರು, ಎಂಜಿನಿಯರುಗಳು ಮತ್ತು ಡಿಪ್ಲೊಮಾ ಹೊಂದಿರುವವರಿಗೆ ಕೇಂದ್ರೀಕೃತ ವಾಕ್-ಇನ್ ಸಂದರ್ಶನವನ್ನು ಆಯೋಜಿಸಲಾಗಿದೆ.

Advertisement

ಬೋರ್ಡ್ ಆಫ್ ಅಪ್ರೆಂಟಿಸ್‌ಶಿಪ್ ತರಬೇತಿ, ಸೌತ್ ರೀಜನ (SR) ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಉನ್ನತ ಶಿಣ ಇಲಾಖೆಯ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾಗಿದೆ. ಪದವೀಧರರು, ಎಂಜಿನಿಯರ್‌ಗಳು ಮತ್ತು ಡಿಪ್ಲೊಮಾ ಹೊಂದಿರುವವರಿಗೆ ಪ್ರಾಯೋಗಿಕ ತರಬೇತಿಯನ್ನು ನೀಡುವ ಉದ್ದೇಶದಿಂದ ಹಿಂದಿನ ಶಿಕ್ಷಣ ಸಚಿವಾಲಯ, ಭಾರತ ಸರ್ಕಾರ `ಪ್ರಾಯೋಗಿಕ ತರಬೇತಿ ಸ್ಟೈಪೆಂಡಿಯರಿ ಯೋಜನೆ' ಯನ್ನು ಪ್ರಾರಂಭಿಸಿತು. ವಾಕ್-ಇನ್-ಇಂಟರ್ವ್ಯೂ ಮೇಳದಲ್ಲಿ 30ಕ್ಕೂ ಹೆಚ್ಚು ಪ್ರಮುಖ ಕೈಗಾರಿಕೆ ಕಂಪನಿಗಳು ಭಾಗವಹಿಸುತ್ತಿವೆ.
ಡಾ. ಎಸ್. ಎಸ್ ಇಂಜಗನೇರಿ, ಪ್ರಿನ್ಸಿಪಾಲ, ಸಹ್ಯಾದ್ರಿ ಕಾಲೇಜು ಆಫ್ ಇಂಜೀನೀರಿಂಗ್ ಅಂಡ್ ಮ್ಯಾನೇಜ್ಮೆಂಟ್, ಮಂಗಳೂರು, ಪ್ರೊಫೆಸರ್ ರಶ್ಮಿ ಭಂಡಾರಿ, ಡೀನ್' - ಪ್ಲೇಸ್ಮೆಂಟ್ ಮತ್ತು ಟ್ರೇನಿಂಗ್ ಹಾಗೂ ಪ್ರೊಫೆಸರ್ ರಮೇಶ್ ಕೆ ಜಿ ಡೀನ್ ಸ್ಟ್ರಾಟಜಿಕ್ ಪ್ಲಾನಿಂಗ್, ಸಹ್ಯಾದ್ರಿ ಕಾಲೇಜು ಇವರುಗಳು ಪತ್ರಿಕಾ ಗೋಷ್ಠಿಯಲ್ಲಿ ಪಾಲುಗೊಳ್ಳುವರು.

ಅರ್ಹತೆ: ಪದವೀಧರರು, ಎಂಜಿನಿಯರುಗಳು ಮತ್ತು ಡಿಪ್ಲೊಮಾ ಪದವೀಧರರಾಗಿರಬೇಕು. ಕಳೆದ 05 ವರ್ಷಗಳಿಂದ ಪಾಸಾದ ಅಂದರೆ ಅಭ್ಯರ್ಥಿಗಳು 2019, 2020, 2021, 2022 ಮತ್ತು 2023 ರಲ್ಲಿ ಉತ್ತೀರ್ಣರಾದ ಪದವೀಧರರಾಗಿರಬೇಕು. • ಅಭ್ಯರ್ಥಿಗಳಿಗೆ ನೋಂದಣಿ ಶುಲ್ಕ ಇರುವುದಿಲ್ಲ.

Advertisement

ಸಂದರ್ಶನಕ್ಕಾಗಿ ಅಭ್ಯರ್ಥಿಗಳ ಜೊತೆಯಲ್ಲಿ ತರಬೇಕಾದ ಡಾಕ್ಯುಮೆಂಟ್ಗಳು: ನವೀಕರಿಸಿದ ಸಿ.ವಿ.ನ ಬಹು ಪ್ರತಿಗಳು • ಪಾಸ್ಪೋರ್ಟ್ ಗಾತ್ರದ ಛಾಯಾಚಿತ್ರಗಳು • ಎಲ್ಲಾ ಮೂಲಗಳು ಮತ್ತು ಪ್ರಮಾಣಪತ್ರಗಳನ್ನು ಒಳಗೊಂಡಂತೆ ಗುರುತು ಕಾರ್ಡ್ಗಳ ಪೋಟೋಕಾಪಿಗಳನ್ನು ತರಬೇಕು. 30 ಕ್ಕೂ ಅಧಿಕ ಕಂಪನಿಗಳು ವಾಕ್-ಇನ್-ಸಂದರ್ಶನದಲ್ಲಿ ಭಾಗವಹಿಸಲಿವೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0824-22 777 66 ಸಂಖ್ಯೆಗೆ ಕರೆ ಮಾಡಬಹುದು.ಎಂದು ಪ್ರಾಂಶುಪಾಲ ಪ್ರಿನ್ಸಿಪಾಲ್‌ ಡಾ. ಎಸ್. ಎಸ್ ಇಂಜಗನೇರಿ, ಮತ್ತು ಪ್ಲೇಸ್ಮೆಂಟ್‌ ಮತ್ತು ಟ್ರೇನಿಂಗ್‌ ಡೀನ್‌ ಪ್ರೊಫೆಸರ್ ರಶ್ಮಿ ಭಂಡಾರಿ ತಿಳಿಸಿದ್ದಾರೆ.

Advertisement
Tags :
jobLatestNewsNewsKannadaಮಂಗಳೂರು
Advertisement
Next Article