ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮೂಲಂಗಿ ಸೇವಿಸುವುದರಿಂದ ಆಗುವ ಪ್ರಯೋಜನಗಳೇನು?

ರಕಾರಿಗಳಲ್ಲಿ ಕೆಲವು ಮಾತ್ರವೇ ಹಸಿಯಾಗಿಯೂ ಸೇವಿಸಬಹುದಾದ ಮತ್ತು ಬೇಯಿಸಿಯೂ ಸೇವಿಸಬಹುದಾಗಿವೆ.
09:10 AM Jan 15, 2024 IST | Ramya Bolantoor

ತರಕಾರಿಗಳಲ್ಲಿ ಕೆಲವು ಮಾತ್ರವೇ ಹಸಿಯಾಗಿಯೂ ಸೇವಿಸಬಹುದಾದ ಮತ್ತು ಬೇಯಿಸಿಯೂ ಸೇವಿಸಬಹುದಾಗಿವೆ. ಕ್ಯಾರೆಟ್, ಎಲೆಕೋಸು, ಟೊಮಾಟೋ ಹಾಗೂ ಮೂಲಂಗಿ ಇವುಗಳಲ್ಲಿ ಪ್ರಮುಖವಾಗಿವೆ.  ಮೂಲಂಗಿಯ ಬಗ್ಗೆ ನಮ್ಮಲ್ಲಿ ಹೆಚ್ಚಿನವರಿಗೆ ಇರುವ ಅಸಡ್ಡೆ. ಇದು ಅಗ್ಗವಾಗಿ ದೊರಕುತ್ತದೆ ಎಂಬ ಕಾರಣಕ್ಕೇ ಹೆಚ್ಚಿನವರ ಅಸಡ್ಡೆಗೆ ಗುರಿಯಾಗಿದೆ. ವಾಸ್ತವದಲ್ಲಿ, ಮೂಲಂಗಿ ಒಂದು ಅದ್ಭುತವಾದ ಆರೋಗ್ಯಕರ ತರಕಾರಿಯಾಗಿದೆ.

Advertisement

ಮೂಲಂಗಿ ಸಾಮಾನ್ಯವಾಗಿ ಬಿಳಿ ಬಣ್ಣದಲ್ಲಿದ್ದರೂ ಇತರ ಬಣ್ಣಗಳಲ್ಲಿಯೂ ದೊರಕುತ್ತದೆ. ಕೆಂಪು, ಹಳದಿ, ನೇರಳೆ, ಬಿಳಿ-ಕೆಂಪು ಮಿಶ್ರಿತ ಬಣ್ಣ, ಹಸಿರು ಮೊದಲಾದ ಬಣ್ಣಗಳಲ್ಲಿ ದೊರಕುತ್ತದೆ.  ಅಪರೂಪಕ್ಕೆ ಕಪ್ಪು ಬಣ್ಣಕ್ಕೆ ಅತಿ ಹತ್ತಿರವಾಗಿರುವ ಗಾಢನೀಲಿ ಬಣ್ಣದ ಮೂಲಂಗಿಗಳೂ ದೊರಕುತ್ತವೆ. ಇದರ ರುಚಿ ಕೊಂಚವೇ ಖಾರವಾಗಿರುವ ಕಾರಣ ಹಲವರಿಗೆ ಇದು ಹಿಡಿಸುವುದಿಲ್ಲ. ಆದರೆ ಇದರಲ್ಲಿರುವ ಅದ್ಭುತವಾದ ಆರೋಗ್ಯಕರ ಗುಣಗಳು ಮಾತ್ರ ಈ ತರಕಾರಿಯನ್ನು ಅತಿ ಮಹತ್ವದ್ದಾಗಿಸುತ್ತದೆ.

ನಮ್ಮ ರಕ್ತದಲ್ಲಿರುವ ಕೆಂಪು ರಕ್ತಕಣಗಳಿಗೆ ಎದುರಾಗುವ ಘಾಸಿಯನ್ನು ನಿಯಂತ್ರಿಸಿ ಕಣಗಳ ನಷ್ಟವಾಗುವಿಕೆಯಿಂದ ತಡೆಯುತ್ತದೆ. ತನ್ಮೂಲಕ ರಕ್ತದ ಆಮ್ಲಜನಕವನ್ನು ಕೊಂಡೊಯ್ಯುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

Advertisement

ಮೂಲಂಗಿಯನ್ನು ನಿತ್ಯವೂ ಸಾಲಾಡ್ ರೂಪದಲ್ಲಿ ನೀವು ಅದನ್ನು ಸೇವಿಸುತ್ತಿದ್ದರೆ, ನಿಮಗೆ ಜೀರ್ಣಕ್ರಿಯೆಯ ಅಥವಾ ಮಲಬದ್ದತೆಯ ತೊಂದರೆ ಎದುರಾಗದು. ಏಕೆಂದರೆ ಇದರಲ್ಲಿ ಸಮೃದ್ದ ಪ್ರಮಾಣದಲ್ಲಿ ಕರಗುವ ಮತ್ತು ಕರಗದ ನಾರಿನಂಶಗಳಿವೆ. ಇವು ಜೀರ್ಣಕ್ರಿಯೆಯನ್ನು ಸುಲಭಗೊಳಿಸುವ ಜೊತೆಗೇ ಪಿತ್ತರಸದ ಉತ್ಪಾದನೆಯನ್ನು ನಿಯಂತಿಸುವ ಮೂಲಕ ಯಕೃತ್ ಮತ್ತು ಪಿತ್ತಕೋಶಗಳನ್ನು ರಕ್ಷಿಸುತ್ತದೆ. ಅಷ್ಟೇ ಅಲ್ಲ, ಈ ನಾರಿನಂಶಗಳು ಜೀರ್ಣಾಂಗದಲ್ಲಿ ಸಾಕಷ್ಟು ನೀರಿನಂಶವನ್ನು ಉಳಿಸಿಕೊಂಡು ಮಲಬದ್ದತೆಯಾಗದಂತೆ ತಡೆಯುತ್ತವೆ.

ಮೂಲಂಗಿಗಳಲ್ಲಿ ಉತ್ತಮ ಪ್ರಮಾಣದ ಆಂಥೋಸೈಯಾನಿನ್ ಗಳಿವೆ. ಇವು ಹೃದಯದ ಕಾರ್ಯಕ್ಷಮತೆ ಸರಿಯಾದ ಕ್ರಮದಲ್ಲಿರಲು ನೆರವಾಗುತ್ತವೆ. ತನ್ಮೂಲಕ ಹೃದಯಸಂಬಂಧಿ ಕಾಯಿಲೆಗಳಿಂದ ರಕ್ಷಿಸುತ್ತವೆ. ಇದರಲ್ಲಿರುವ ಅಧಿಕ ಪ್ರಮಾಣದ ವಿಟಮಿನ್ ಸಿ, ಫೋಲಿಕ್ ಆಮ್ಲ ಮತ್ತು ಫ್ಲೇವನಾಯ್ಡುಗಳೂ ಹೃದಯದ ಆರೋಗ್ಯವನ್ನು ವೃದ್ದಿಸುತ್ತವೆ.

Advertisement
Tags :
HEALTHLatestNewsNewsKannada
Advertisement
Next Article