ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ನೈಟ್ ಡ್ಯೂಟಿ ಮಾಡುವ ಮಧುಮೇಹಿಗಳ ಜೀವನ ಕ್ರಮ ಹೇಗಿರಬೇಕು?

ಮಧುಮೇಹ ಒಮ್ಮೆ ಬಂತೆಂದರೆ ಅದು ಪೂರ್ಣವಾಗಿ ವಾಸಿಯಾಗುವ ಕಾಯಿಲೆಯಲ್ಲ ಹೀಗಾಗಿ ಅದನ್ನು  ನಿಯಂತ್ರಣದಲ್ಲಿಟ್ಟುಕೊಂಡು ತಮ್ಮ ಜೀವನ ಮಾಡುವುದು ಅನಿವಾರ್ಯವಾಗಿದೆ. ಹೀಗಿರುವಾಗ ಮಧುಮೇಹಿಗಳು ಹೇಗೆ ನಿತ್ಯದ ಕೆಲಸ ಕಾರ್ಯಗಳೊಂದಿಗೆ ಬದುಕನ್ನು ಕಟ್ಟಿಕೊಳ್ಳಬೇಕು ಎಂಬುದರ ಬಗ್ಗೆ ಅರಿತುಕೊಂಡರೆ  ಜೀವನ ನಿರ್ವಹಣೆ ಮಾಡುವುದು ಕಷ್ಟವಾಗಲಾರದು.
03:32 PM Apr 15, 2024 IST | Ashika S

ಮಧುಮೇಹ ಒಮ್ಮೆ ಬಂತೆಂದರೆ ಅದು ಪೂರ್ಣವಾಗಿ ವಾಸಿಯಾಗುವ ಕಾಯಿಲೆಯಲ್ಲ ಹೀಗಾಗಿ ಅದನ್ನು  ನಿಯಂತ್ರಣದಲ್ಲಿಟ್ಟುಕೊಂಡು ತಮ್ಮ ಜೀವನ ಮಾಡುವುದು ಅನಿವಾರ್ಯವಾಗಿದೆ. ಹೀಗಿರುವಾಗ ಮಧುಮೇಹಿಗಳು ಹೇಗೆ ನಿತ್ಯದ ಕೆಲಸ ಕಾರ್ಯಗಳೊಂದಿಗೆ ಬದುಕನ್ನು ಕಟ್ಟಿಕೊಳ್ಳಬೇಕು ಎಂಬುದರ ಬಗ್ಗೆ ಅರಿತುಕೊಂಡರೆ  ಜೀವನ ನಿರ್ವಹಣೆ ಮಾಡುವುದು ಕಷ್ಟವಾಗಲಾರದು.

Advertisement

ಮಧುಮೇಹ ತಗುಲುವ ತನಕವೂ ನಮಗೆ  ಗೊತ್ತೇ ಆಗುವುದಿಲ್ಲ. ಇದು ನಮಗೆ ತಗುಲಿಕೊಳ್ಳಲು ಹೆಚ್ಚು ಸಮಯ  ಬೇಕಾಗುವುದಿಲ್ಲ. ಕಾರಣ ನಮ್ಮ ಬದುಕಿನ ವಿಧಾನ ಇತ್ತೀಚೆಗಿನ ದಿನಗಳಲ್ಲಿ ಬಹುಬೇಗ ಕಾಯಿಲೆಗೆ ತುತ್ತಾಗುವಂತೆ ಮಾಡುತ್ತಿದೆ. ಅದರಲ್ಲೂ ದುಡಿದು ಬದುಕುವವರಿಗೆ ಮಧುಮೇಹ ತಗುಲಿತೆಂದರೆ ತುಸು ಕಷ್ಟವಾಗುವುದರಲ್ಲಿ ಎರಡು ಮಾತಿಲ್ಲ.

ಇನ್ನು ಮಧುಮೇಹಿಗಳು  ರಾತ್ರಿ ಪಾಳಿಯಲ್ಲಿ ನಿದ್ದೆಗೆಟ್ಟು ಕೆಲಸ ಮಾಡುವುದರಿಂದ ತೊಂದರೆ ಇದೆಯಾ? ಒಂದು ವೇಳೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಬೇಕಾದರೆ ಏನು ಮಾಡಬೇಕು? ಹೀಗೆ ಕೆಲವೊಂದು ಪ್ರಶ್ನೆಗಳು ಕಾಡಬಹುದು.  ಇಂತಹವರಿಗೆ ವೈದ್ಯರು ಶಿಸ್ತುಬದ್ಧ ಜೀವನ ನಡೆಸುವ ಸಲಹೆಗಳನ್ನು ನೀಡುತ್ತಾರೆ.

Advertisement

ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಲ್ಲಿ ನಿದ್ರೆ, ಆಹಾರ, ಉದ್ವೇಗ ಒತ್ತಡ ತುಸು ಹೆಚ್ಚಾಗಿಯೇ ಇರುವುದರಿಂದ ಜತೆಗೆ  ದೇಹದಲ್ಲಿ ಒಂದಷ್ಟು ಅಡಚಣೆಗಳು ಆಗುವುದರಿಂದ ಕೆಲವೊಮ್ಮೆ ತೂಕ ಮತ್ತು ಇನ್ಸೂಲಿನ್ ನಿರೋಧಕತೆಗೆ ಕಾರಣವಾಗಿ ಬಿಡುತ್ತದೆ. ಇನ್ನು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಲ್ಲಿ ಉದ್ವೇಗದ ಮಟ್ಟವೂ ಹೆಚ್ಚಾಗಿರುತ್ತದೆ.

ಇನ್ನು  ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ  ಮಧುಮೇಹಿಗಳು ಏನೇನು ಮಾಡಿಕೊಳ್ಳಬೇಕು ಎನ್ನುವುದನ್ನು  ನೋಡುವುದಾದರೆ ರಕ್ತದಲ್ಲಿನ ಸಕ್ಕರೆಯ ಮಟ್ಟ ಅಳೆಯುವ ಸಾಧನವನ್ನಿಟ್ಟುಕೊಂಡು ಆಗಾಗ್ಗೆ ಸಕ್ಕರೆಯ ಮಟ್ಟವನ್ನು ಪರೀಕ್ಷಿಸಿಕೊಳ್ಳಬೇಕು. ಹಸಿವಾದಾಗ ಸೇವಿಸಲು ಅನುಕೂಲವಾಗುವಂತೆ ಲಘು ಉಪಹಾರಗಳನ್ನಿಟ್ಟುಕೊಳ್ಳಬೇಕು.

ಕೆಲಸದ ಅವಧಿಯಲ್ಲಿ ತಿನ್ನಲು ಅನುಕೂಲವಾಗುವಂತೆ ಒಣಹಣ್ಣುಗಳನ್ನಿಟ್ಟುಕೊಳ್ಳಬೇಕು. ಔಷಧಿ, ನೀರು, ಜತೆಗಿರಲಿ. ವಾರದ ಕೆಲಸದ ಅವಧಿಗೆ ತಕ್ಕಂತೆ ಆಹಾರ ಕ್ರಮವನ್ನು ಅಳವಡಿಸಿಕೊಳ್ಳಬೇಕು. ಇನ್ನು ಮಲಗುವ ಮುನ್ನ ಹೆಚ್ಚು ಆಹಾರ  ಸೇವನೆ ಮಾಡುವುದು ಒಳ್ಳೆಯದಲ್ಲ.

ಮಧುಮೇಹಿಗಳು ವ್ಯಾಯಾಮಕ್ಕೆ ಆದ್ಯತೆ ನೀಡಬೇಕು, ವಾಹನಗಳಿದ್ದರೂ ನಡೆಯುವುದಕ್ಕೆ ಆದ್ಯತೆ ನೀಡಿದರೆ  ಒಳ್ಳೆಯದು. ಇದರಿಂದ ಒಂದಷ್ಟು ದೇಹಕ್ಕೆ ವ್ಯಾಯಾಮವಾಗುತ್ತದೆ.  ಎಲ್ಲಕ್ಕಿಂತ ಹೆಚ್ಚಾಗಿ  ಮಧುಮೇಹಿಗಳು  ನನಗೆ  ಕಾಯಿಲೆ  ಬಂದು ಬಿಡ್ತಲ್ಲ ಎಂದು ತಲೆಕೆಡಿಸಿಕೊಳ್ಳುವ ಬದಲು ಅದರ ನಿಯಂತ್ರಣಕ್ಕೆ ಏನೇನು ಮಾಡಬಹುದು ಎಂಬುದನ್ನು ಅರಿತು ಮುನ್ನಡೆದರೆ ಒಳ್ಳೆಯದು.

Advertisement
Tags :
diabeticsHEALTHLatetsNewsLifestyleNewsKarnataka
Advertisement
Next Article