ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮಣಿಪುರ ಹಿಂಸಾಚಾರ: 87 ಮೃತದೇಹಗಳ ಸಾಮೂಹಿಕ ಅಂತ್ಯಕ್ರಿಯೆ

ಮಣಿಪುರದ ಚುರಾಚಂದ್‌ಪುರ ಜಿಲ್ಲೆಯಲ್ಲಿ ಜನಾಂಗೀಯ ಹಿಂಸಾಚಾರಕ್ಕೆ ಬಲಿಯಾದ 87 ಝೋ-ಕುಕಿ ಸಂತ್ರಸ್ತರ ಮೃತದೇಹಗಳನ್ನು ಕೋರ್ಟ್​ ನಿರ್ದೇಶನದಂತೆ ಅಂತ್ಯಕ್ರಿಯೆ ಮಾಡಲಾಗಿದೆ.
10:50 AM Dec 22, 2023 IST | Ashitha S

ಇಂಫಾಲ್: ಮಣಿಪುರದ ಚುರಾಚಂದ್‌ಪುರ ಜಿಲ್ಲೆಯಲ್ಲಿ ಜನಾಂಗೀಯ ಹಿಂಸಾಚಾರಕ್ಕೆ ಬಲಿಯಾದ 87 ಝೋ-ಕುಕಿ ಸಂತ್ರಸ್ತರ ಮೃತದೇಹಗಳನ್ನು ಕೋರ್ಟ್​ ನಿರ್ದೇಶನದಂತೆ ಅಂತ್ಯಕ್ರಿಯೆ ಮಾಡಲಾಗಿದೆ.

Advertisement

ರಾಜ್ಯದಲ್ಲಿ ಭಾರೀ ಗಲಾಟೆಯಿಂದ ಮೇ 3ರಂದು ಜನಾಂಗೀಯ ಹಿಂಸಾಚಾರದಿಂದ 87 ಮಂದಿ ಮೃತಪಟ್ಟಿದ್ದರು. ಈ ಎಲ್ಲ ಮೃತದೇಹಗಳನ್ನು ಇಲ್ಲಿವರೆಗೆ ಶವಾಗಾರಗಳಲ್ಲಿ ಇಡಲಾಗಿತ್ತು. ಸದ್ಯ ಸುಪ್ರೀಂಕೋರ್ಟ್​ ಈ ಸಂಬಂಧ ಅಂತಿ ಸಂಸ್ಕಾರಕ್ಕೆ ಹಾಗೂ ಸಮಾಧಿ ಸ್ಥಳವನ್ನ ಖಚಿತಪಡಿಸಿದೆ.

ಈ ಹಿನ್ನೆಲೆಯಲ್ಲಿ ಇಂಫಾಲ್‌ನ ವಿವಿಧ ಶವಾಗಾರಗಳಿಂದ ನಲವತ್ತೊಂದು ಶವಗಳನ್ನು ವಿಮಾನದ ಮೂಲಕ ತರಲಾಗಿತ್ತು. ಇನ್ನು 46 ಮೃತದೇಹಗಳನ್ನ ಚುರಚಂದಪುರ ಜಿಲ್ಲಾ ಆಸ್ಪತ್ರೆಯಿಂದ ತಂದು ಕೋರ್ಟ್ ನಿರ್ದೇಶನದಂತೆ​ ಒಟ್ಟಿಗೆ ಸಾಂಗ್ಪಿ ಜಿಲ್ಲೆಯ ಸೆಹ್ಕೆನ್‌ನ ಪ್ರದೇಶದಲ್ಲಿ ಸಾಮೂಹಿಕ ಅಂತ್ಯಕ್ರಿಯೆ ನಡೆಸಲಾಯಿತು.

Advertisement

ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರದಿಂದ ಸಾಕಷ್ಟು ಆಸ್ತಿ-ಪಾಸ್ತಿಗಳು ನಾಶವಾಗಿದ್ದವು. ಎಷ್ಟೋ ಮನೆಗಳಿಗೆ ಬೆಂಕಿ ಕೂಡ ಹಚ್ಚಿ ವಿಕೃತಿ ಮೆರೆಯಲಾಗಿತ್ತು.

Advertisement
Tags :
GOVERNMENTindiaLatestNewsNewsKannadaಕೋರ್ಟ್ನವದೆಹಲಿಮಣಿಪುರ ಹಿಂಸಾಚಾರಸಾಮೂಹಿಕ ಅಂತ್ಯಕ್ರಿಯೆ
Advertisement
Next Article