ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

"ನೀನು ದಪ್ಪಗಿದ್ದೀಯ" ಎಂದ ಪತಿ: ನೊಂದು ನೇಣಿಗೆ ಶರಣಾದ ಪತ್ನಿ !

ಪತಿ ತನ್ನ ಪತ್ನಿಗೆ ನೀನು ದಪ್ಪಗಿದ್ದೀಯ ಎಂದು ಪದೇ ಪದೇ ಅಪಹಾಸ್ಯ ಮಾಡಿದ್ದಕ್ಕೆ ಮನನೊಂದ ಪತ್ನಿ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆ ಮುಂಬೈನ ಬೈಕುಲ್ಲಾದಲ್ಲಿ ನಡೆದಿದೆ. ಅಸ್ಲಂ ಕಾಂಡೆ ಮತ್ತು ತೆಹ್ಮಿನಾ 2016 ರಲ್ಲಿ ವಿವಾಹವಾಗಿದ್ದರು. ಆದರೆ ಪತ್ನಿ ತೆಹ್ಮಿನಾ ಸಾಕಷ್ಟು ದಪ್ಪಗಿದ್ದರಿಂದ ಮಗುವನ್ನು ಹೆರಲು ಸಾಧ್ಯವಾಗದ ಕಾರಣ ಬೇರೊಬ್ಬಳನ್ನು ಮದುವೆಯಾಗುವುದಾಗಿ ಪತಿ ಅಸ್ಲಂ ಕಾಂಡೆ ಪ್ರತೀ ದಿನ ಪೀಡಿಸುತ್ತಿದ್ದ.
04:46 PM Feb 23, 2024 IST | Ashitha S

ಮುಂಬೈ: ಪತಿ ತನ್ನ ಪತ್ನಿಗೆ ನೀನು ದಪ್ಪಗಿದ್ದೀಯ ಎಂದು ಪದೇ ಪದೇ ಅಪಹಾಸ್ಯ ಮಾಡಿದ್ದಕ್ಕೆ ಮನನೊಂದ ಪತ್ನಿ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆ ಮುಂಬೈನ ಬೈಕುಲ್ಲಾದಲ್ಲಿ ನಡೆದಿದೆ. ಅಸ್ಲಂ ಕಾಂಡೆ ಮತ್ತು ತೆಹ್ಮಿನಾ 2016 ರಲ್ಲಿ ವಿವಾಹವಾಗಿದ್ದರು. ಆದರೆ ಪತ್ನಿ ತೆಹ್ಮಿನಾ ಸಾಕಷ್ಟು ದಪ್ಪಗಿದ್ದರಿಂದ ಮಗುವನ್ನು ಹೆರಲು ಸಾಧ್ಯವಾಗದ ಕಾರಣ ಬೇರೊಬ್ಬಳನ್ನು ಮದುವೆಯಾಗುವುದಾಗಿ ಪತಿ ಅಸ್ಲಂ ಕಾಂಡೆ ಪ್ರತೀ ದಿನ ಪೀಡಿಸುತ್ತಿದ್ದ.

Advertisement

ಇದಲ್ಲದೇ ನೀನು ದಪ್ಪಗಿದ್ದೀಯ, ನಿಂಗೆ ಡ್ರೆಸ್ಸಿಂಗ್​ ಸೆನ್ಸ್ ಇಲ್ಲ ಎಂದು ಪದೇ ಪದೇ ಗೇಲಿ ಮಾಡುತ್ತಿದ್ದ. ಇದರಿಂದ ಖಿನ್ನತೆಗೆ ಜಾರಿದ್ದಳು.ಮೃತ ಮಹಿಳೆಯನ್ನು ತೆಹ್ಮಿನಾ ಅಸ್ಲಂ ಕಾಂಡೆ ಮತ್ತು ಆಕೆಯ ಪತಿ ಅಸ್ಲಂ ಕಾಂಡೆ ಎಂದು ಗುರುತಿಸಲಾಗಿದೆ. ಈ ವಿರುದ್ಧ ತೆಹ್ಮಿನಾ ತಾಯಿ ಪೋಲಿಸರಿಗೆ ದೂರು ನೀಡಿದ್ದು “ನನ್ನ ಮಗಳು ಸಾಕಷ್ಟು ಮಾನಸಿಕವಾಗಿ ನೊಂದಿದ್ದಳು. ಆದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ನನ್ನ ಮಗಳ ಸಾವಿಗೆ ನ್ಯಾಯ ಒದಗಿಸಿಕೊಡಿ” ಎಂದು ಮೃತ ಮಹಿಳೆಯ ತಾಯಿ ಹೇಳಿಕೊಂಡಿದ್ದಾರೆ. ಈ ವಿಷಯವಾಗಿ ತನಿಖೆ ನಡೆಸಿದ ಪೋಲಿಸರು ಪತಿಯ ಅಪಹಾಸ್ಯಕ್ಕೆ ಖಿನ್ನತೆಗೆ ಜಾರಿದ್ದ ಪತ್ನಿ ಆತ್ಮಹತ್ಯೆ ಮಾಡಿಕೊಡಿರುವುದಾಗಿ ತಿಳಿಸಿದ್ದಾರೆ ಹಾಗೂ ಪತಿ ತನ್ನ ಹೆಂಡತಿಗೆ ಅಪಹಾಸ್ಯ ಮಾಡುತ್ತಿದ್ದಾನೆ ಎಂಬ ಆರೋಪದ ಆಧಾರದ ಮೇಲೆ ಪತಿ ಮತ್ತು ಆತನ ಸಹೋದರಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Advertisement

Advertisement
Tags :
crimedeathindiaLatestNewsNewsKannadaPOLICEsuicdeನವದೆಹಲಿಮುಂಬೈ
Advertisement
Next Article