For the best experience, open
https://m.newskannada.com
on your mobile browser.
Advertisement

ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ; ದೇಶದಲ್ಲಿ ಪತ್ರಕರ್ತರ ಭದ್ರತೆಗಿಲ್ಲ ಗ್ಯಾರಂಟಿ!

ಮಾಧ್ಯಮವನ್ನು ಸಂವಿಧಾನದ 4ನೇ ಆಯಾಮ ಎಂದು ಕರೆಯಲಾಗುತ್ತದೆ. ಜಗತ್ತಿನಲ್ಲಿ ನಡೆಯುವ ವಿಚಾರಗಳನ್ನು ಸಮಾಜಕ್ಕೆ ತಿಳಿಸುವ ಕಾರ್ಯವನ್ನು ಮಾಧ್ಯಮಗಳನ್ನು ಮಾಡುತ್ತವೆ. ಸತ್ಯವನ್ನು ಸಾರ್ವಜನಿಕರಿಗೆ ತಲುಪಿಸುವ ಜವಾಬ್ದಾರಿ ಮಾಧ್ಯಮದ ಮೇಲಿದೆ. ಆದರೂ ಕೆಲವೊಮ್ಮೆ ಮಾಧ್ಯಮಗಳು ತಮ್ಮ ಕಾರ್ಯನಿರ್ವಹಿಸುವಾಗ ಬೆದರಿಕೆಗಳು, ಹಿಂಸೆ, ಸೆನ್ಸಾರ್‌ನಂತಹ ಸವಾಲುಗಳು ಎದುರಾಗುತ್ತದೆ.
12:40 PM May 03, 2024 IST | Ashitha S
ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ  ದೇಶದಲ್ಲಿ ಪತ್ರಕರ್ತರ ಭದ್ರತೆಗಿಲ್ಲ ಗ್ಯಾರಂಟಿ

ಮಾಧ್ಯಮವನ್ನು ಸಂವಿಧಾನದ 4ನೇ ಆಯಾಮ ಎಂದು ಕರೆಯಲಾಗುತ್ತದೆ. ಜಗತ್ತಿನಲ್ಲಿ ನಡೆಯುವ ವಿಚಾರಗಳನ್ನು ಸಮಾಜಕ್ಕೆ ತಿಳಿಸುವ ಕಾರ್ಯವನ್ನು ಮಾಧ್ಯಮಗಳನ್ನು ಮಾಡುತ್ತವೆ. ಸತ್ಯವನ್ನು ಸಾರ್ವಜನಿಕರಿಗೆ ತಲುಪಿಸುವ ಜವಾಬ್ದಾರಿ ಮಾಧ್ಯಮದ ಮೇಲಿದೆ. ಆದರೂ ಕೆಲವೊಮ್ಮೆ ಮಾಧ್ಯಮಗಳು ತಮ್ಮ ಕಾರ್ಯನಿರ್ವಹಿಸುವಾಗ ಬೆದರಿಕೆಗಳು, ಹಿಂಸೆ, ಸೆನ್ಸಾರ್‌ನಂತಹ ಸವಾಲುಗಳು ಎದುರಾಗುತ್ತದೆ.

Advertisement

ಸರ್ಕಾರ ಹಾಗೂ ಸಾರ್ವಜನಿಕರು ಮಾಧ್ಯಮಗಳು ಹಾಗೂ ಪತ್ರಕರ್ತರಿಗೆ ನ್ಯಾಯಮಾರ್ಗದಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸಲು ಪೂರಕ ವಾತಾವರಣವನ್ನು ಕಲ್ಪಿಸಬೇಕು. ಪತ್ರಕರ್ತರು ಹಾಗೂ ಮಾಧ್ಯಮರಂಗ ಎದುರಿಸುತ್ತಿರುವ ಸವಾಲು ಹಾಗೂ ಅವರು ಕೆಲಸ ಮಾಡುತ್ತಿರುವ ರೀತಿ ಸುಗಮವಾಗಿದೆಯೇ ಎಂಬುದನ್ನು ತಿಳಿಯುವ ಉದ್ದೇಶದಿಂದ ಪ್ರತಿವರ್ಷ ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ. ಇದು ಪತ್ರಕರ್ತರಾಗುವುದು ಸುಲಭದ ಕೆಲಸವಲ್ಲ ಎಂಬುದನ್ನು ನೆನಪಿಸುತ್ತದೆ.

ಪತ್ರಿಕೋದ್ಯಮ ಆರಂಭವಾಗಿಂದಿನಿಂದಲೂ ಪತ್ರಿಕೆಗಳನ್ನು, ಪತ್ರಕರ್ತರನ್ನು, ಪತ್ರಿಕಾ ಸ್ವಾತಂತ್ರ್ಯವನ್ನು ಧಮನಿಸುವ ಪ್ರಯತ್ನಗಳು ನಡೆಯುತ್ತಲೇ ಇವೆ. ವಸ್ತುನಿಷ್ಠವಾದ ವರದಿಗಳಿಗೆ ಅಡ್ಡಗಾಲು ಹಾಕುವುದು, ಪತ್ರಕರ್ತರನ್ನು ಧಮನಿಸುವುದು, ಅವರ ಹತ್ಯೆಗೆ ಯತ್ನಿಸುವುದು ಮುಂತಾದ ಘಟನೆಗಳು ದಿನನಿತ್ಯ ಕೇಳಿ ಬರುತ್ತಿವೆ.

Advertisement

ಇದನ್ನೆಲ್ಲಾ ನಿವಾರಿಸಿ ಪತ್ರಿಕಾ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಪ್ರತಿವರ್ಷ ಮೇ 3 ರಂದು ವರ್ಲ್ಡ್‌ ಫ್ರೀಡಂ ಡೇ ಅಥವಾ ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ ಎಂದು ಆಚರಿಸಲಾಗುತ್ತದೆ.

ಈ ದಿನಾಚರಣೆಗೆ ವಿಶ್ವಸಂಸ್ಥೆ ಕೂಡಾ ಸಾಥ್‌ ನೀಡುತ್ತಿದೆ. ಮೇ 3 ರಂದು ವರ್ಲ್ಡ್‌ ಪ್ರೆಸ್‌ ಫ್ರೀಡಂ ಡೇಯನ್ನಾಗಿ ಘೋಷಿಸಿರುವ ವಿಶ್ವಸಂಸ್ಥೆ ಈ ಮೂಲಕ ಜನರ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿಗೆ ಹೆಚ್ಚಿನ ಮಹತ್ವ ನೀಡಿದೆ. ಈ ದಿನದಂದು ಪತ್ರಿಕಾ ಕ್ಷೇತ್ರಕ್ಕೆ ಅದ್ಭುತ ಕೊಡುಗೆಯನ್ನು ನೀಡಿದವರಿಗೆ ಯುನೇಸ್ಕೊ ಪ್ರಶಸ್ತಿಗಳನ್ನು ಪ್ರಕಟಿಸುತ್ತದೆ.

1986, ಡಿಸೆಂಬರ್‌ 17 ರಂದು ಡ್ರಗ್‌ ಮಾಫಿಯಾ ಬಗ್ಗೆ ಪರಿಣಾಮಕಾರಿಯಾದ ಲೇಖನ ಬರೆದು ಹತ್ಯೆಗೀಡಾದ ಕೊಲಂಬಿಯಾ ಪತ್ರಕರ್ತ ಗುಲ್ಲೆರ್ಮೊ ಕ್ಯಾನೊ ಇಸಾಜ ಅವರ ಗೌರವಾರ್ಥವಾಗಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

ಇದಲ್ಲದೆ ಪ್ರತಿವರ್ಷ ಒಂದು ನಿಗದಿತ ಪ್ರದೇಶದಲ್ಲಿ ಮಾಧ್ಯಮದ ಗಣ್ಯರು, ಪತ್ರಿಕಾ ಸ್ವಾತಂತ್ರ್ಯವನ್ನು ಪ್ರತಿಪಾದಿಸುವ ಸಂಸ್ಥೆಗಳು ಮತ್ತು ವಿಶ್ವಸಂಸ್ಥೆಯ ಇತರ ಉಪಸಂಸ್ಥೆಗಳ ಅಧಿಕಾರಿಗಳ ಸಮ್ಮೇಳನವನ್ನು ಈ ದಿನ ಮಾಡಲಾಗುತ್ತದೆ.

ಇನ್ನು ಜಾಗತಿಕ ಮಾಧ್ಯಮ ವಾಚ್‌ಡಾಗ್ ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ (ಆರ್‌ಎಸ್‌ಎಫ್) ಬಿಡುಗಡೆ ಮಾಡಿದ ಇತ್ತೀಚಿನ ವರದಿಯ ಪ್ರಕಾರ, 2023 ರ ವರ್ಲ್ಡ್ ಪ್ರೆಸ್ ಫ್ರೀಡಮ್ ಇಂಡೆಕ್ಸ್‌ನಲ್ಲಿ ಭಾರತದ ಶ್ರೇಯಾಂಕ 180 ದೇಶಗಳಲ್ಲಿ 161 ಕ್ಕೆ ಕುಸಿದಿದೆ.

ಪಾಕ್‌ಗೆ ಹೋಲಿಸಿದಾಗ ಈ ಹಿಂದೆ 157 ನೇ ಸ್ಥಾನದಲ್ಲಿದ್ದ ದೇಶ 150 ಕ್ಕೆ ಬಂದಿದೆ. 2022ರಲ್ಲಿ ಭಾರತ 150ನೇ ಸ್ಥಾನದಲ್ಲಿತ್ತು. ಶ್ರೀಲಂಕಾವು ಸೂಚ್ಯಂಕದಲ್ಲಿ ಗಮನಾರ್ಹ ಸುಧಾರಣೆಯನ್ನು ಮಾಡಿದೆ, 2022 ರಲ್ಲಿ 146 ನೇ ಸ್ಥಾನದಲ್ಲಿದ್ದರೆ ಈ ವರ್ಷ 135 ನೇ ಸ್ಥಾನದಲ್ಲಿದೆ.

ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕವು ಐದು ಅಂಶಗಳನ್ನು ಒಳಗೊಂಡಿದ್ದು ಇದಕ್ಕಾಗಿ ಅಂಕಗಳನ್ನು ಪರಿಗಣಿಸಲಾಗುತ್ತದೆ ತದನಂತರ ದೇಶಗಳನ್ನು ಶ್ರೇಣೀಕರಿಸಲಾಗುತ್ತದೆ. ಈ ಐದು ಅಂಶಗಳೆಂದರೆ ರಾಜಕೀಯ ಸೂಚಕ, ಆರ್ಥಿಕ ಸೂಚಕ, ಶಾಸಕಾಂಗ ಸೂಚಕ, ಸಾಮಾಜಿಕ ಸೂಚಕ ಮತ್ತು ಭದ್ರತಾ ಸೂಚಕ ಎಂದಾಗಿದೆ.

ಮುಖ್ಯವಾಗಿ   ಭಾರತಕ್ಕೆ ಕಳವಳಕಾರಿಯಾಗಿರುವ ಕುಸಿತವು ಭದ್ರತಾ ಸೂಚಕ ವರ್ಗದಲ್ಲಿದೆ. ಇಲ್ಲಿ ಇದರ ಅಂಕ 172 ಎಂದೆನಿಸಿದೆ. 180 ದೇಶಗಳ ಪೈಕಿ ಉಳಿದ ಎಂಟು ರಾಷ್ಟ್ರಗಳಲ್ಲಿ ಮಾಧ್ಯಮ ಕ್ಷೇತ್ರಕ್ಕೆ ಸೂಕ್ತ ರಕ್ಷಣೆ ಇಲ್ಲ ಅಂತೆಯೇ ಚೀನಾ, ಮೆಕ್ಸಿಕೊ, ಇರಾನ್, ಪಾಕಿಸ್ತಾನ, ಸಿರಿಯಾ, ಯೆಮೆನ್, ಉಕ್ರೇನ್ ಮತ್ತು ಮ್ಯಾನ್ಮಾರ್ ಹೊರತುಪಡಿಸಿ ವಿಶ್ವದ ಪತ್ರಕರ್ತರ ಭದ್ರತೆಯನ್ನು ಖಾತ್ರಿಪಡಿಸುವ ವಿಷಯದಲ್ಲಿ ಭಾರತ ಎಲ್ಲಕ್ಕಿಂತ ಕೆಟ್ಟದಾಗಿದೆ ಎಂದಾಗಿದೆ.

ಪತ್ರಕರ್ತರ ಸ್ಥಿತಿ ತುಂಬಾ ಗಂಭೀರವಾಗಿದ್ದು ಎಂದು ಆರ್‌ಎಸ್‌ಎಫ್ ಗುರುತಿಸಿರುವ ದೇಶಗಳಲ್ಲಿ  ಭಾರತ ಕೂಡ ಒಂದಾಗಿದ್ದು ದೇಶದಲ್ಲಿ ಪತ್ರಕರ್ತರಿಗೆ ರಕ್ಷಣೆ ಇಲ್ಲವೇ ಎಂಬ ಕಳವಳಕ್ಕೆ ಕಾರಣವಾಗಿದೆ.

ವಿಶ್ವ ಪತ್ರಿಕಾ ಸ್ವಾತಂತ್ರ್ಯದ ದಿನದ ಮಹತ್ವ:
ಈ ವರ್ಷ ಪತ್ರಿಕಾ ಸ್ವಾತಂತ್ರ್ಯ ದಿನ ಥೀಮ್‌ ʼಜಗತ್ತಿಗಾಗಿ ಮಾಧ್ಯಮ, ನೈಸರ್ಗಿಕ ಬಿಕ್ಕಟ್ಟಿನ ಮುಖಪುಟವಾಗಿ ಪ್ರತಿಕೋದ್ಯಮʼ ಎಂಬುದು ಈ ವರ್ಷ ಥೀಮ್‌ ಆಗಿದೆ. ಸಾರ್ವಜನಿಕರಿಗೆ ಯಾವಾಗಲೂ ಎಲ್ಲಾ ರೀತಿಯ ಮಾಹಿತಿಗಳು ಲಭ್ಯವಾಗಬೇಕು, ಪತ್ರಕರ್ತರು ತಮ್ಮ ಕೆಲಸಗಳನ್ನು ಮಾಡಲು ಸುರಕ್ಷಿತ ಸ್ಥಳ ಹಾಗೂ ಅವಕಾಶವನ್ನು ಸರ್ಕಾರ ಕಲ್ಪಿಸಬೇಕು ಎಂಬುದನ್ನು ಪುನರುಚ್ಚರಿಸಲು ಸಹಾಯ ಮಾಡುವ ದಿನ ಇದಾಗಿದೆ. ಈ ದಿನವು ಸತ್ಯವನ್ನು ಹೇಳಲು ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ಎಲ್ಲಾ ಸಮಯದಲ್ಲೂ ಗೌರವಿಸುತ್ತದೆ ಎಂದು ಖಚಿತಪಡಿಸಿಕೊಳ್ಳುವಲ್ಲಿ ಮಾಧ್ಯಮ ಸಂಸ್ಥೆಗಳು ಮತ್ತು ಪತ್ರಕರ್ತರಿಗೆ ನೆರವಾಗುತ್ತದೆ. ಇದು ಮಾಧ್ಯಮ ಸಂಸ್ಥೆಗಳು ಹಾಗೂ ಪತ್ರಕರ್ತರ ಗೌರವವನ್ನು ಬೆಂಬಲಿಸುವ ದಿನವೂ ಆಗಿದೆ.

Advertisement
Tags :
Advertisement