ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಶುದ್ಧ ಸಸ್ಯಹಾರಿಗಳಿಗೆ ಸಿಹಿಸುದ್ದಿ ನೀಡಿದ ಜೋಮಾಟೋ; ಗ್ರಾಹಕರ ಅನುಕೂಲಕ್ಕೆ ತಕ್ಕ ನಡೆ

ಆನ್‌ಲೈನ್‌ ಆಹಾರ ವಿತರಕ ಕಂಪನಿ ಜೊಮಾಟೋದಲ್ಲಿ ಇನ್ನುಮುಂದೆ ಶುದ್ಧ ಸಸ್ಯಹಾರಿ ಆಹಾರವೂ ದೊರಕಲಿದೆ. ಕಂಪನಿಯ ಸ್ಥಾಪಕ ಮತ್ತು ಸಿಇಒ ದೀಪಿಂದರ್‌ ಗೋಯಲ್‌ ಮಂಗಳವಾರ ಈ ಘೋಷಣೆ ಮಾಡಿದ್ದು, ʼಭಾರತ ಜಗತ್ತಿನಲ್ಲೇ ಅತಿ ಹೆಚ್ಚು ಸಸ್ಯಹಾರಿಗಳಿರುವ ದೇಶ. ನಮ್ಮ ಗ್ರಾಹಕರಿಂದ ನಮಗೆ ದೊರಕಿರುವ ಪ್ರತಿಕ್ರಿಯೆಯಲ್ಲಿ ಅಂತಹವರು ತಾವು ಸೇವಿಸುವ ಆಹಾರದ ತಯಾರಿ ಮತ್ತು ವಿರತಣೆಯ ಬಗ್ಗೆ ಕಾಳಜಿ ಹೊಂದಿದ್ದಾರೆಂದು ತಿಳಿಯಿತುʼ ಎಂದರು.
07:33 PM Mar 19, 2024 IST | Maithri S

ಆನ್‌ಲೈನ್‌ ಆಹಾರ ವಿತರಕ ಕಂಪನಿ ಜೊಮಾಟೋದಲ್ಲಿ ಇನ್ನುಮುಂದೆ ಶುದ್ಧ ಸಸ್ಯಹಾರಿ ಆಹಾರವೂ ದೊರಕಲಿದೆ. ಕಂಪನಿಯ ಸ್ಥಾಪಕ ಮತ್ತು ಸಿಇಒ ದೀಪಿಂದರ್‌ ಗೋಯಲ್‌ ಮಂಗಳವಾರ ಈ ಘೋಷಣೆ ಮಾಡಿದ್ದು, ʼಭಾರತ ಜಗತ್ತಿನಲ್ಲೇ ಅತಿ ಹೆಚ್ಚು ಸಸ್ಯಹಾರಿಗಳಿರುವ ದೇಶ. ನಮ್ಮ ಗ್ರಾಹಕರಿಂದ ನಮಗೆ ದೊರಕಿರುವ ಪ್ರತಿಕ್ರಿಯೆಯಲ್ಲಿ ಅಂತಹವರು ತಾವು ಸೇವಿಸುವ ಆಹಾರದ ತಯಾರಿ ಮತ್ತು ವಿರತಣೆಯ ಬಗ್ಗೆ ಕಾಳಜಿ ಹೊಂದಿದ್ದಾರೆಂದು ತಿಳಿಯಿತುʼ ಎಂದರು.

Advertisement

ಇನ್ನುಮುಂದೆ ಶುದ್ಧ ಸಸ್ಯಹಾರಿಗಳಿಗಾಗಿ ಅವರ ಇಚ್ಛೆಯಂತೆ ಸಸ್ಯಾಹಾರವನ್ನು ವಿತರಿಸುವುದಾಗಿ ತಿಳಿಸಿದ ಗೋಯಲ್‌, ಮಂಸಾಹಾರಿ ಖಾದ್ಯಗಳನ್ನು ತಯಾರಿಸುವ ಹೋಟೆಲ್‌ಗಳನ್ನು ಹೊರತುಪಡಿಸಿ ಕೇವಲ ಸಸ್ಯಾಹಾರಿ ವ್ಯಂಜನಗಳನ್ನು ತಯಾರಿಸುವ ರೆಸ್ಟೋರೆಂಟ್‌ಗಳಿಂದ ಈ ಆಹಾರ ಪೂರೈಕೆಯಾಗುತ್ತದೆ ಎಂದು ಭರವಸೆ ನೀಡಿದರು.

ತಮ್ಮ ಈ ಪ್ರಯತ್ನವು ಯಾವುದೇ ಧರ್ಮ ಅಥವ ರಾಜಕೀಯ ಆದ್ಯತೆಗಳ ಆಧಾರದಲ್ಲಿ ತಾರತಮ್ಯ ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

Advertisement

Advertisement
Tags :
Deepinder GoyalindiaLatestNewsNewsKannadaPure Vegzomato
Advertisement
Next Article